ಬಿಡುಗಡೆಯಾಯ್ತು ‘ಕನಕ’ನ ಪ್ರೊಮೋ ಸಾಂಗ್ಸ್, ಟೀಸರ್

ಈ ಸುದ್ದಿಯನ್ನು ಶೇರ್ ಮಾಡಿ

kanaka-1
ಚಂದನವನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿಕೊಂಡು ಯಶಸ್ವಿ ಚಿತ್ರಗಳನ್ನು ನೀಡುತ್ತಾ ಬಂದಿರುವ ಆರ್.ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಸಿದ್ದವಾಗಿರುವ ಕನಕ ಚಿತ್ರ ಗಣರಾಜ್ಯೋತ್ಸವ ದಿನದಂದು ಅದ್ಧೂರಿಯಾಗಿ ತೆರೆ ಮೇಲೆ ಬರಲು ಸನ್ನದ್ಧವಾಗಿದೆ.
ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಹಾಗೂ ಪ್ರೊಮೋ ಸಾಂಗ್ಸ್ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಸಂಗೀತ ನಿರ್ದೇಶಕ ನವೀನ್ ಸಜ್ಜು ವಿಶೇಷವಾಗಿ ಕಾಂಪೋಜ್ ಮಾಡಿರುವ ಕನಕ ಚಿತ್ರದ ಪ್ರಮೋಷನಲ್ ಸಾಂಗನ್ನು ಸಿನಿಮಾ ಬಿಡುಗಡೆಯಾದ ನಂತರ ಎರಡನೇ ವಾರದಲ್ಲಿ ತೆರೆ ಮೇಲೆ ಮೂಡಿ ಬರಲಿದೆ.
ಟ್ರೈಲರ್ ಅನಾವರಣ ಮಾಡಿದ ನಂತರ ಮಾತನಾಡಿದ ನಟ, ನಿರ್ಮಾಪಕ ಕೆ.ಪಿ.ನಂಜುಂಡಿ 14 ವರ್ಷಗಳ ನಂತರ ನಾನು ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದೇನೆ. ನಿರ್ದೇಶಕ ಚಂದ್ರು ಬಂದು ಈ ಪಾತ್ರದ ಬಗ್ಗೆ ಹೇಳಿದಾಗ ನನ್ನ ವ್ಯಕ್ತಿತ್ವಕ್ಕೆ ತುಂಬಾ ಹತ್ತಿರವಾದಂತ ರೋಲ್ ಆಗಿದ್ದರಿಂದ ಒಪ್ಪಿಕೊಂಡೆ. ಚಂದ್ರು ನನಗೆ ನಾರಾಯಣ್ ಜೊತೆ ಕೆಲಸ ಮಾಡುತ್ತಿರುವಾಗಿನಿಂದಲೇ ಗೊತ್ತು. ಆತನಲ್ಲಿರುವ ಪ್ರತಿಭೆಯನ್ನು ನಾನು ಆಗಲೇ ಗುರುತಿಸಿದ್ದೆ. ಕನಕ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ. ಖಂಡಿತ ಚಂದ್ರುಗೆ ಈ ಸಿನಿಮಾ ಒಳ್ಳೆ ಹೆಸರನ್ನು ತಂದುಕೊಡುತ್ತದೆ ಎಂದು ಹೇಳಿದರು. ನಂತರ ದುನಿಯಾ ವಿಜಯ್ ಮಾತನಾಡಿ, ಕನಕ ಸಿನಿಮಾ ತುಂಬಾ ಅದ್ಧೂರಿಯಾಗಿ ಮೂಡಿ ಬಂದಿದೆ. ರಂಗಾಯಣ ರಘು ಅವರು ನನ್ನ ಪ್ರತಿ ಸಿನಿಮಾದಲ್ಲೂ ಇದ್ದೇ ಇರ್ತಾರೆ. ನಂಜುಂಡಿ ಅವರ ಮಾತು ಸತ್ಯ. ಚಂದ್ರು ಯಾವಾಗ ಮುನಿಸಿಕೊಳ್ತಾರೆ ಅನ್ನೋದೇ ಗೊತ್ತಾಗಲ್ಲ.
ಸಿನಿಮಾ ಬಗ್ಗೆ ತುಂಬಾ ಪ್ರೀತಿ ಇಟ್ಟುಕೊಂಡಿರುವ ನಿರ್ದೇಶಕ ಚಂದ್ರು ಕೆಲಸದಲ್ಲಿ ಮಗ್ನರಾದವರೆಂದರೆ ಯಾರ ಫೋನ್‍ನ್ನೂ ರಿಸೀವ್ ಮಾಡಲ್ಲ ಎಂದು ಹೇಳಿದರು. ನಂತರ ನಾಯಕಿ ಮಾನ್ವಿತಾ ಹರೀಶ್ ಮಾತನಾಡಿ, ಕೇವಲ 3ಸಾವಿರ ರೂ.ಗಳನ್ನು ಇಟ್ಟುಕೊಂಡು ಬೆಂಗಳೂರಿಗೆ ಬಂದೆ. ನಂತರ ಕೆಂಡಸಂಪಿಗೆ ಸಿನಿಮಾದಲ್ಲಿ ಅವಕಾಶ ಸಿಕ್ತು. ಈ ಚಿತ್ರದಲ್ಲೂ ಒಳ್ಳೇ ಪಾತ್ರವಿದೆ. ರಂಗಾಯಣ ರಘು ಅವರ ಜತೆ ಇಡೀ ಸಿನಿಮಾದಲ್ಲಿ ಆ್ಯಕ್ಟ್ ಮಾಡಬೇಕೆಂಬ ಆಸೆಯಿತ್ತು ಎಂದು ಹೇಳಿಕೊಂಡರು. ನಂತರ ಯುವ ನಟ ಡಾ.ದರ್ಶನ್ ಮಾತನಾಡಿ, ನಾನು ಈ ಚಿತ್ರದಲ್ಲಿ ದುನಿಯಾ ವಿಜಯ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.
ಸಂಗೀತ ನಿರ್ದೇಶಕ ನವೀನ್ ಸಜ್ರ್ಜ ಮಾತನಾಡಿ, ನಾನು ಈ ಸಿನಿಮಾದಲ್ಲಿ ಸಂಗೀತ ನಿರ್ದೇಶಕನಾಗಿ ವರ್ಕ್ ಮಾಡಲು ನಿರ್ದೇಶಕ ಆರ್.ಚಂದ್ರು ಅವರೇ ಕಾರಣ. ಅವರು ಮೊದಲ ಬಾರಿಗೆ ಛಾನ್ಸ್ ಕೊಟ್ಟಿದ್ದರಿಂದ ಸಂಗೀತ ನಿರ್ದೇಶಕನಾಗಿ ಚಿತ್ರದ ಪ್ರೋಮೊಷನ್‍ಗಾಗಿ ಒಂದು ವಿಶೇಷ ಹಾಡನ್ನು ನಾನೇ ಕಂಪೋಜ್ ಮಾಡಿ ಚಿತ್ರೀಕರಣ ಮಾಡಿದ್ದೇನೆ. ಈ ಹಾಡನ್ನು ಚಿತ್ರದ ಪ್ರೋಮೋಷನ್‍ಗಾಗಿ ಬಳಸಿಕೊಳ್ಳಲಾಗುವುದು ಎಂದು ಹೇಳಿದರು. ಕೊನೆಯಲ್ಲಿ ಮಾತನಾಡಿದ ನಿರ್ದೇಶಕ ಆರ್.ಚಂದ್ರು, ಕನಕ ನನ್ನ ಬ್ಯಾನರನಲ್ಲಿ ನಿರ್ಮಾಣವಾಗಿರುವ ಅದ್ಧೂರಿ ಚಿತ್ರಗಳಲ್ಲಿ ಒಂದಾಗಿದೆ. ತಾಜ್‍ಮಹಲ್ ಚಿತ್ರದಿಂದ ಈವರೆಗೆ ನಾನು ನಡೆದು ಬಂದ ಹಾದಿಯಲ್ಲಿ ಕನ್ನಡ ಚಿತ್ರರಂಗದ ಹಲವಾರು ಪ್ರಮುಖರು ಸಹಕಾರ ನೀಡಿದ್ದಾರೆ. ನಂಜುಂಡಿ ಅವರು ನನ್ನ ಆರಂಭದ ದಿನಗಳಿಂದ ನನಗೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ನನ್ನ ಯಾವುದೇ ಸಿನಿಮಾಗೆ ಹಣದ ತೊಂದರೆ ಎದುರಾದಾಗ ಅವರು ಸಹಾಯ ಮಾಡ್ತಾರೆ. ಇದೇ ಜನವರಿ 26ರಂದು ಚಿತ್ರವನ್ನು ರಿಲೀಸ್ ಮಾಡಬೇಕೆಂದು ಪ್ಲಾನ್ ಮಾಡಿಕೊಂಡಿದ್ದೇನೆ ಎಂದು ಹೇಳಿದರು. ಹಾಗೆ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆ.ಮುನೇಂದ್ರ ಅವರು ಸಾಥ್ ನೀಡಿದ್ದಾರೆ.

Facebook Comments

Sri Raghav

Admin