ಮುಂದಿನ ವಾರ ಬಹರೈನ್ ಗೆ ಹಾರಲಿದ್ದಾರೆ ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul--01
ನವದೆಹಲಿ, ಜ.4-ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂದಿನ ವಾರ ಬಹರೈನ್ ಪ್ರವಾಸ ಕೈಗೊಳ್ಳಲಿದ್ದು, ಆ ದೇಶದ ಪ್ರಧಾನಮಂತ್ರಿ ಮತ್ತು ಅನಿವಾಸಿ ಭಾರತೀಯರನ್ನು(ಎನ್‍ಆರ್‍ಐಗಳು) ಭೇಟಿ ಮಾಡುವ ಕಾರ್ಯಕ್ರಮವಿದೆ.  ಕಾಂಗ್ರೆಸ್ ಅಧ್ಯಕ್ಷರಾದ ನಂತರ ರಾಹುಲ್ ವಿದೇಶಿ ಪ್ರವಾಸ ಕೈಗೊಳ್ಳುತ್ತಿರುವುದು ಇದೇ ಮೊದಲು. ಜ.7ರಂದು ಬಹರೈನ್ ಗಣರಾಜ್ಯಕ್ಕೆ ತೆರಳುವ ಅವರು ಜ.8ರಂದು ಎನ್‍ಆರ್‍ಐಗಳ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೇ ಆ ದೇಶದ ಪ್ರಧಾನಮಂತ್ರಿ ಖಾಲೀಫಾ ಬಿನ್ ಸಲ್ಮಾನ್ ಅಲ್ ಖಾಲೀಫಾ ಮತ್ತು ರಾಜ ಮನೆತನದ ಸದಸ್ಯರನ್ನು ಸಹ ಭೇಟಿ ಮಾಡುವ ಕಾರ್ಯಕ್ರಮವಿದೆ. ಎನ್‍ಆರ್‍ಐಗಳ ಆಹ್ವಾನದ ಮೇರೆಗೆ ಬಹರೈನ್ ಪ್ರವಾಸ ಕೈಗೊಂಡಿರುವ ರಾಹುಲ್, ಜ.9ರಂದು ಭಾರತಕ್ಕೆ ಹಿಂದಿರುಗಲಿದ್ದಾರೆ.

Facebook Comments

Sri Raghav

Admin