ಸಿಎಂ ರಾಜೀನಾಮೆಗೆ ಆರ್.ಅಶೋಕ್ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

Ashok

ಬೆಂಗಳೂರು, ಜ.4- ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ನಡೆಯುತ್ತಿದೆ. ಈ ಸರ್ಕಾರಕ್ಕೆ ಇನ್ನೆಷ್ಟು ಕೊಲೆಗಳು ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಕೂಡಲೇ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯನವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಒಂದು ತಿಂಗಳ ಅಂತರದಲ್ಲಿ ಎರಡು ಕೊಲೆಗಳು ನಡೆದಿವೆ. ನಮ್ಮ ಸರ್ಕಾರ ಅಧಿಕಾರ ದಲ್ಲಿದ್ದಾಗ ನಿಮ್ಮ ಕಾರ್ಯಕರ್ತರ ಕೊಲೆಗಳು ನಡೆದಿತ್ತಾ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ದೀಪಕ್‍ರಾವ್ ಸೇರಿದಂತೆ ಹಿಂದೂ ಕಾರ್ಯಕರ್ತರ ಕೊಲೆ ಗಳಿಗೆ ಪಿಎಫ್‍ಐನವರೇ ಕಾರಣ. ಕೂಡಲೇ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕೆಂದು ಒತ್ತಾಯಿಸಿ ಅಶೋಕ್, ರಾಜ್ಯದಲ್ಲಿ ನಡೆದಿರುವ 24 ಹಿಂದೂ ಕಾರ್ಯಕರ್ತರ ಕೊಲೆಗಳಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಕಿಡಿಕಾರಿದರು. ಕೊಲೆ ಪ್ರಕರಣಗಳಲ್ಲಿ ರಾಜಕಾರಣ ಮಾಡುವುದರಲ್ಲಿ ಸಿದ್ದರಾಮಯ್ಯ ಎತ್ತಿದ ಕೈ. ನಾವು ಸಾವಿನ ಮನೆಯಲ್ಲಿ ಎಂದೂ ರಾಜಕಾರಣ ಮಾಡಿಲ್ಲ. ಮಾಡುವುದೂ ಇಲ್ಲ. ಇನ್ನೆಷ್ಟು ಕೊಲೆಗಳನ್ನು ನಾವು ಸಹಿಸಿಕೊಂಡಿರಬೇಕು ಎಂದು ಪ್ರಶ್ನಿಸಿದರು.

ಪಿಎಫ್‍ಐಗೆ ಸರ್ಕಾರದ ಕುಮ್ಮಕ್ಕಿದೆ. ದೀಪಕ್‍ರಾವ್ ಹಿಂದೂಪರ ಸಂಘಟನೆಯ ಯುವಕ. ಅವರ ಕೊಲೆಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ. ಹಾಗಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರೆಯಲು ಅರ್ಹರಿಲ್ಲ ಎಂದು ಅಶೋಕ್ ಹೇಳಿದರು. ನಗರಕ್ಕೆ ಯೋಗಿ: ನಗರದಲ್ಲಿ ಇದೇ ಭಾನುವಾರ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಭಾಗವಹಿಸಲಿದ್ದಾರೆ ಎಂದು ಅಶೋಕ್ ಇದೇ ವೇಳೆ ತಿಳಿಸಿದರು.
ಯೋಗಿ ಆದಿತ್ಯಾನಾಥ್ ಬರುತ್ತಾರೆಂದರೆ ಚುನಾವಣೆಗೆ ಹಿಂದುತ್ವದ ಅಜೆಂಡಾ ಎಂದಲ್ಲ. ಪ್ರಧಾನಿ ಮೋದಿಯವರ ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಎಂಬುದೇ ಬಿಜೆಪಿಯ ಧ್ಯೇಯ. ನಾವು ಅದರಂತೆ ನಡೆಯುತ್ತೇವೆ. ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

Facebook Comments

Sri Raghav

Admin