ಹೆಲ್ಮೆಟ್’ಗಳನ್ನು ವಶಪಡಿಸಿಕೊಳ್ಳುವುದು ಸರಿಯಲ್ಲ : ಅಣ್ಣಾಮಲೈ

ಈ ಸುದ್ದಿಯನ್ನು ಶೇರ್ ಮಾಡಿ

Anna-Malai--01

ಚಿಕ್ಕಮಂಗಳೂರು, ಜ.4- ಹೆಲ್ಮೆಟ್ ವಶಪಡಿಸಿಕೊಳ್ಳುವ ಅವಕಾಶವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ತಿಳಿಸಿದರು. ಮೈಸೂರಿನಲ್ಲಿ ಬೈಕ್ ಸವಾರರ ಹಾಫ್ ಹೆಲ್ಮೆಟ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನೀವು ಜಿಲ್ಲೆಯಲ್ಲಿ ಹೆಲ್ಮೆಟ್‍ಗಳನ್ನು ವಶಪಡಿಸಿಕೊಳ್ಳುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಾಫ್ ಹೆಲ್ಮೆಟ್‍ಅಥವಾ ಫುಲ್ ಹೆಲ್ಮೆಟ್ ಯಾವುದೇ ಆಗಲಿ ಪೊಲೀಸರು ವಶಕ್ಕೆ ಪಡೆಯುವ ಕಾನೂನು ಇಲ್ಲ. ಅವಕಾಶವೂ ಇಲ್ಲ ಎಂದು ತಿಳಿಸಿದರು.

ಬೈಕ್ ಸವಾರರ ಸುರಕ್ಷತೆಗಾಗಿ ಐಎಸ್‍ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸಬೇಕು ಎಂಬ ಕಾನೂನು ಇದೆ. ಆ ನಿಯಮಗಳನ್ನು ಪಾಲಿಸಬೇಕು. ಅದರ ಬದಲಾಗಿ ಹಾಫ್ ಹೆಲ್ಮೆಟ್‍ಗಳನ್ನು ಧರಿಸಿದವರನ್ನು ಪೊಲೀಸರು ಹಿಡಿದು ದಂಡ ವಿಧಿಸುವುದು ಸರಿಯಲ್ಲ. ಬೈಕ್ ಸವಾರರಿಗೆ ಐಎಸ್‍ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸಿ ಹಾಫ್ ಹೆಲ್ಮೆಟ್ ಧರಿಸಬೇಡಿ ಎಂದು ಹೇಳಿ ಕಳುಹಿಸಬೇಕು. ಆದರೆ, ಹೆಲ್ಮೆಟ್ ವಶಪಡಿಸಿಕೊಳ್ಳುವಾಗಿಲ್ಲ ಎಂದು ಹೇಳಿದರು.

Facebook Comments

Sri Raghav

Admin