7ರಂದು ನವರಸ ನಟನ ಅಕಾಡೆಮಿಗೆ ಆಡಿಷನ್

ಈ ಸುದ್ದಿಯನ್ನು ಶೇರ್ ಮಾಡಿ

nava

ಬಣ್ಣ ದ ಬದುಕಿಗೆ ಪ್ರವೇಶ ಪಡೆದು ಆಸಕ್ತ ಉಳ್ಳ ಪ್ರತಿಭೆಗಳಿಗೆ ಇಲ್ಲೊಂದು ಸುವರ್ಣ ಅವಕಾಶ ಸಿಗುತ್ತಿದೆ. ಇದೇ ಜ.7ರಂದು ನವರಸ ನಟನ ಅಕಾಡೆಮಿ ಆಡಿಷನ್ ಮಾಡುವ ಮೂಲಕ ಅಭ್ಯರ್ಥಿ ಗಳನ್ನು ಆಯ್ಕೆ ಮಾಡಿ ಚಿತ್ರರಂಗದಲ್ಲಿ ನೆಲೆ ಕಾಣಲು ಉತ್ತಮ ಅವಕಾಶವನ್ನು ಮಾಡಲಿದೆಯಂತೆ. ಕಳೆದ 22 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಮಾಲೂರು ಶ್ರೀನಿವಾಸ್ ಅವರು ನವರಸ ನಟನ ಅಕಾಡೆಮಿಯನ್ನು ಹುಟ್ಟು ಹಾಕಿದ್ದಾರೆ. ಜಗ್ಗೇಶ್ ಅವರ ಆಶೀರ್ವಾದದೊಂದಿಗೆ ಆರಂಭಿ ಸಿರುವ ಈ ಇನ್‍ಸ್ಟಿಟ್ಯೂಟ್‍ನಲ್ಲಿ ಹಿರಿಯ ನಿರ್ದೇಶಕ ರಾದ ಎಸ್. ನಾರಾಯಣ್ ಹಾಗೂ ಎಸ್. ಮಹೇಂದರ್ ನೇತೃತ್ವದಲ್ಲಿ ಆಡಿಷನ್ ನಡೆಯಲಿದೆ.

ಈ ಸಂಸ್ಥೆಯ ಪ್ರಾಂಶುಪಾಲರಾಗಿ ವಿಶಾಲ್‍ರಾಜ್ ಕಾರ್ಯ ನಿರ್ವಹಿಸಲಿದ್ದು, ಅನುಭವಿ ತಂತ್ರಜ್ಞರು ಹಾಗೂ ಕಲಾವಿದರು ಮಾರ್ಗದರ್ಶನ ನೀಡಲಿದ್ದಾರೆ.
ಇದೇ 7 ರಂದು ಸದಾಶಿವನಗರದಲ್ಲಿರುವ ನವರಸ ನಟನ ಅಕಾಡೆಮಿಯಲ್ಲಿ ಆಡಿಷನ್ ನಡೆಯಲಿದ್ದು ತರಗತಿಗಳು ಫೆಬ್ರವರಿ 5ರಿಂದ ಶುರುವಾಗಲಿದೆ. ಹೆಚ್ಚಿನ ಮಾಹಿತಿಗಾಗಿ: 9880219666 , 9880419666 ಸಂಪರ್ಕಿಸಬಹುದು.

Facebook Comments

Sri Raghav

Admin