ಅಯ್ಯೋ, ಪಾಪಿ ನನ್ ಮಗ್ನೆ : ರೋಗಗ್ರಸ್ತ ತಾಯಿಯನ್ನು ಕೊಂದ ಪುತ್ರ, ಸಿಸಿಟಿವಿಯಲ್ಲಿ ನೀಚ ಕೃತ್ಯ ಬಯಲು..!

ಈ ಸುದ್ದಿಯನ್ನು ಶೇರ್ ಮಾಡಿ

Son--02

ರಾಜ್‍ಕೋಟ್, ಜ.5-ರೋಗಗ್ರಸ್ತ ತಾಯಿಯನ್ನು ಅಪಾರ್ಟ್‍ಮೆಂಟ್ ಕಟ್ಟಡ ತಾರಸಿಯಿಂದ ಕೆಳಗೆ ಎಸೆದು ಕೊಲೆಗೈದಿದ್ದ ದುಷ್ಟ ಮಗನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಗುಜರಾತ್‍ನ ರಾಜ್‍ಕೋಟ್‍ನಲ್ಲಿ ನಡೆದಿದೆ. ರಾಜ್‍ಕೋರ್ಟ್‍ನ ಮೋಡಿ ಫಾರ್ಮಸಿ ಕಾಲೇಜ್‍ನಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಸಂದೀಪ್ ನಾಥ್‍ವಾನಿ ಬಂಧಿತ ಆರೋಪಿ. ತನ್ನ ತಾಯಿ ಜಯಶ್ರೀ ಬೆನ್ ಅವರನ್ನು ಈತ ಕಟ್ಟಡದ ಮೇಲಿಂದ ಕೆಳಗೆ ತಳ್ಳಿ ಕೊಲೆಗೈದು ತನಗೇನು ಗೊತ್ತಿಲ್ಲದಂತೆ ನಾಟಕವಾಡಿದ್ದ. ಆದರೆ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈತನ ನೀಚ ಕೃತ್ಯ ಬಯಲಾಗಿದೆ.

ಮೆದುಳಿನಲ್ಲಿ ರಕ್ತಸ್ರಾವದಿಂದ ತೀವ್ರ ಅಸ್ವಸ್ಥರಾಗಿದ್ದ ಜಯಶ್ರೀ ಅವರಿಗೆ ತಮ್ಮ ದೈನಂದಿನ ಕಾರ್ಯವನ್ನು ಸ್ವತ: ನಿರ್ವಹಿಸಿಕೊಳ್ಳಲು ಆಗುತ್ತಿರಲಿಲ್ಲ. ಇದಕ್ಕಾಗಿ ಮತ್ತೊಬ್ಬರನ್ನು ಆಶ್ರಯಿಸಬೇಕಿತ್ತು. ಇದೇ ವಿಷಯವಾಗಿ ಆಕೆಯ ಏಕೈಕ ಪುತ್ರ ಸಂದೀಪ್ ಮತ್ತು ಸೊಸೆ ನಡುವೆ ಅಗಾಗ ಜಗಳವಾಗುತ್ತಿತ್ತು. ಆಕೆಯ ಪ್ರತ್ಯೇಕ ಸ್ಥಳದಲ್ಲಿ ಬಿಡುವುವಂತೆ ಪತ್ನಿಯ ಒತ್ತಡ ಹೆಚ್ಚಾದಾಗ ತಾಯಿಯನ್ನೇ ಮುಗಿಸಲು ಸಂದೀಪ್ ಸಂಚು ರೂಪಿಸಿದ್ದ.

ತನ್ನ ತಾಯಿಯನ್ನು ಮೆಟ್ಟಿಲುಗಳ ಮೂಲಕ ಅಪಾರ್ಟ್‍ಮೆಂಟ್‍ನ ತಾರಸಿಗೆ ಎಳೆದೊಯ್ದು ಅಲ್ಲಿಂದ ಕೆಳಗೆ ತಳ್ಳಿದ್ದ. ತನ್ನ ತಾಯಿ ತಾರಸಿಯಲ್ಲಿ ದೇವರಿಗೆ ಪಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಕೆಳಗೆ ಬಿದ್ದು ಮೃತಪಟ್ಟರು ಎಂದು ಬಿಂಬಿಸಲು ಯತ್ನಿಸಿದ. ಆದರೆ ತಾಯಿ ಮತ್ತು ಮಗ ತಾರಸಿ ಮೇಲೆ ಇದ್ದ ದೃಶ್ಯವನ್ನು ಪಕ್ಕದ ಅಪಾರ್ಟ್‍ಮೆಂಟ್‍ನ ಸೆಕ್ಯುರಿಟಿ ಗಾರ್ಡ್ ನೋಡಿದ್ದ. ಪೊಲೀಸರು ಪ್ರಕರಣದ ವಿಚಾರಣೆ ನಡೆಸಿ ಅನುಮಾನಗೊಂಡು ಸಿಸಿಟಿವಿ ಕ್ಯಾಮೆರಾ ವೀಕ್ಷಿಸಿದಾಗ ಆತ ತನ್ನ ತಾಯಿಯನ್ನು ಮೆಟ್ಟಿಲಿನಿಂದ ತಾರಸಿಗೆ ಎಳೆದೊಯ್ಯುತ್ತಿರುವ ದೃಶ್ಯ ಕಂಡುಬಂದಿತು.   ತನ್ನನ್ನು ಪೊಲೀಸರು ಬಂಧಿಸುತ್ತಾರೆ ಎಂದು ಎದೆನೋವಿಗೆ ಒಳಗಾದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದರು.

Facebook Comments

Sri Raghav

Admin