ಐಎಸ್ ಉಗ್ರರ ಮೇಲೆ ವಿಮಾನಗಳಿಂದ ಬಾಂಬ್ ದಾಳಿ : 20 ನಾಗರಿಕರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ISIS--02

ಡಮಾಸ್ಕಸ್, ಜ.5-ಸಿರಿಯಾ ರಾಜಧಾನಿ ಡಮಾಸ್ಕಸ್‍ನ ಪೂರ್ವಭಾಗದಲ್ಲಿ ಇಸ್ಲಾಮಿಕ್ ಸ್ಟೇಟ್(ಐಎಸ್) ಭಯೋತ್ಪಾದಕರ ಹತೋಟಿ ಸ್ಥಳವೊಂದರ ಮೇಲೆ ರಷ್ಯಾ ಯುದ್ಧ ವಿಮಾನಗಳು ನಡೆಸಿದ ದಾಳಿಯಲ್ಲಿ 20 ಮಂದಿ ನಾಗರಿಕರು ಮೃತಪಟ್ಟು, ಅನೇಕರು ತೀವ್ರ ಗಾಯಗೊಂಡಿದ್ದಾರೆ. ಯುದ್ಧ ವಿಮಾನಗಳು ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶದ ಎರಡು ಜನವಸತಿ ಕಟ್ಟಡಗಳ ಮೇಲೆ ಬಾಂಬ್‍ಗಳ ದಾಳಿ ನಡೆಸಿದವು. ಮಿಸ್ರಬಾ ಪಟ್ಟಣದಲ್ಲಿ ನಾಲ್ಕು ಬಾಂಬ್ ಆಕ್ರಮಣದಿಂದ ಎರಡು ಕಟ್ಟಡಗಳು ಧ್ವಂಸಗೊಂಡವು.

ಈ ಆಕ್ರಮಣದಲ್ಲಿ 11 ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಕನಿಷ್ಠ 20 ನಾಗರಿಕರು ಹತರಾಗಿ, ಡಜನ್‍ಗಟ್ಟಲೆ ಮಂದಿ ಗಾಯಗೊಂಡಿದ್ದಾರೆ ಎಂದು ಬ್ರಿಟನ್ ಮೂಲದ ಸಿರಿಯಾ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

Facebook Comments

Sri Raghav

Admin