ಕರ್ತವ್ಯ ನಿರತ ಪೊಲೀಸ್ ಕಾನ್‍ಸ್ಟೆಬಲ್ ಹೃದಯಾಘಾತದಿಂದ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Police-Const

ಕುಣಿಗಲ್, ಜ.5-ಕರ್ತವ್ಯ ನಿರತ ಕಾನ್‍ಸ್ಟೆಬಲ್‍ವೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜಣ್ಣ (42) ಹೃದಯಾಘಾತದಿಂದ ಮೃತಪಟ್ಟ ಕಾನ್‍ಸ್ಟೆಬಲ್. ಈತ ಕಳೆದ 3 ವರ್ಷಗಳಿಂದ ಹುಲಿಯೂರು ದುರ್ಗ ಪೊಲೀಸ್ ಠಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ತಾಲೂಕಿನ ತರೆಯಕುಪ್ಪೆ ಗ್ರಾಮದವರಾಗಿದ್ದು, 15 ವರ್ಷಗಳ ಹಿಂದೆ ಕತ್ವ್ಯಕ್ಕೆ ಸೇರಿ ಹೆಬ್ಬೂರು, ಕೋರಾದಲ್ಲಿ ಸೇವೆ ಸಲ್ಲಿಸಿ ನಂತರ ಹುಲಿಯೂರು ದುರ್ಗ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ನಿನ್ನೆ ಮಧ್ಯಾಹ್ನ ಕರ್ತವ್ಯದಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿದ್ದು, ನಂತರ ಸಹೋದ್ಯೋಗಿಗಳು ಪಟ್ಟಣದ ಎಂ.ಎಂ.ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

Facebook Comments

Sri Raghav

Admin