ಗಡಿಯಲ್ಲಿ ಹುದುಗಿಸಿಟ್ಟಿದ್ದ ನೆಲಬಾಂಬ್‍ಗಳನ್ನು ಹುಡುಕಿ ನಿಷ್ಕ್ರಿಯಗೊಳಿಸಿದ ಸೇನೆ, ತಪ್ಪಿದ ಭಾರೀ ಅನಾಹುತ

ಈ ಸುದ್ದಿಯನ್ನು ಶೇರ್ ಮಾಡಿ

Border--01

ಜಮ್ಮು, ಜ.5-ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಮತ್ತು ಅಂತಾರಾಷ್ಟ್ರೀಯ ಗಡಿ(ಐಬಿ)ಯಲ್ಲಿ ಪಹರೆ ಕಾಯುತ್ತಿರುವ ಭಾರತೀಯ ಯೋಧರಿಗೆ ಉಪಟಳ ನೀಡಲು ಪಾಕಿಸ್ತಾನ ನುಸುಳುಕೋರರಿಂದ ಹುದುಗಿಸಿಡಲಾದ ನೆಲಬಾಂಬ್‍ಗಳು ಮತ್ತು ಸುಧಾರಿತ ಸ್ಫೋಟಕಗಳನ್ನು ಪತ್ತೆ ಮಾಡಿ ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆಯನ್ನು ಸೇನೆ ಇಂದು ಆರಂಭಿಸಿದೆ.   ಶೋಧದ ವೇಳೆ ಹಲವು ಬಾಂಬ್‍ಗಳು ಮತ್ತು ಐಇಡಿಗಳನ್ನು ಭದ್ರತಾ ಪಡೆಗಳು ಯಶಸ್ವಿಯಾಗಿ ಪತ್ತೆ ಮಾಡಿ ನಿಷ್ಕ್ರಿಯಗೊಳಿಸಲಾಗಿದ್ದು, ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟಲಾಗಿದೆ.

ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಜೀವಂತ ಬಾಂಬ್‍ಗಳು ಮತ್ತು ಸುಧಾರಿತ ಸ್ಪೋಟಕ ಸಾಧನಗಳನ್ನು(ಐಇಡಿ) ಹುದುಗಿಸಿಟ್ಟು ವಿಧ್ವಂಸಕ ಕೃತ್ಯಗಳನ್ನು ಎಸಗಲು ಉಗ್ರರು ಮತ್ತು ನುಸುಳುಕೋರರು ಅಪಾಯಕಾರಿ ತಂತ್ರ ರೂಪಿಸಿದ್ದಾರೆ ಮಾಹಿತಿ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯ ಎಲ್‍ಒಸಿ ಬಳಿ ವ್ಯಾಪಕ ಶೋಧ ಮತ್ತು ನಿಷ್ಕ್ರಿಯ ಕಾರ್ಯ ಪ್ರಗತಿಯಲ್ಲಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.  ರಜೌರಿ ಜಿಲ್ಲೆಯ ನೌಷೆರಾ ವಲಯದಲ್ಲಿ ಈ ನೆಲಬಾಂಬ್‍ಗಳು ಮತ್ತು ಆತ್ಯಾಧುನಿಕ ಸ್ಫೋಟಕಗಳನ್ನು ಪತ್ತೆ ಮಾಡುವ ಕಾರ್ಯ ಮುಂದುವರಿದಿದೆ.

ಹಲವು ಬಾಂಬ್‍ಗಳು ಮತ್ತು ಐಇಡಿಗಳನ್ನು ಭದ್ರತಾ ಪಡೆಗಳು ಯಶಸ್ವಿಯಾಗಿ ಪತ್ತೆ ಮಾಡಿ ನಿಷ್ಕ್ರ್ರಿಯಗೊಳಿಸಿದ್ದು, ಮುಂದೆ ಸಂಭವಿಸಬಹುದಾಗಿದ್ದ ಭಾರೀ ವಿಧ್ವಂಸಕ ಕೃತ್ಯಗಳನ್ನು ತಪ್ಪಿಸಲಾಗಿದೆ. ಈ ಶೋಧ ಮತ್ತು ನಿಷ್ಕ್ರಿಯ ಕಾರ್ಯಾಚರಣೆಗಾಗಿ ಸೇನೆಯ ವಿಶೇಷ ದಳ ಹಾಗೂ ಅತ್ಯಾಧುನಿಕ ಸಾಧನಗಳನ್ನು ಬಳಸಲಾಗಿದೆ. ಇದಕ್ಕಾಗಿ ಡ್ರೋಣ್‍ಗಳ ಸಹಾಯವನ್ನು ಪಡೆಯಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.   ಎಲ್‍ಒಸಿ ಮತ್ತು ಐಬಿ ಬಳಿ ಇತ್ತೀಚೆಗೆ ಪಾಕಿಸ್ತಾನದ ಕಡೆಯಿಂದ ಒಳನುಸುಳುವಿಕೆ ಯತ್ನಗಳು ಹೆಚ್ಚಾಗುತ್ತಿವೆ. ಇದನ್ನು ಭಾರತೀಯ ಯೋಧರು ಯಶಸ್ವಿಯಾಗಿ ನಿಗ್ರಹಿಸುತ್ತಿದ್ದಾರೆ.

ಗಡಿಯಲ್ಲಿ ದುಷ್ಕøತ್ಯಗಳನ್ನು ಎಸಗಲು ಕುತಂತ್ರ ಅನುಸರಿಸುತ್ತಿರುವ ಪಾಕ್ ಇದಕ್ಕಾಗಿ ತರಬೇತಿ ಪಡೆದ ಉಗ್ರರು ಮತ್ತು ನುಸುಳುಕೋರರ ನೆರವು ಪಡೆದು ಎಲ್‍ಒಸಿ ಮತ್ತು ಐಬಿಗಳಲ್ಲಿ ಜೀವಂತ ಬಾಂಬ್ ಮತ್ತು ಐಇಡಿಗಳನ್ನು ಇಟ್ಟು ಸಾಧ್ಯವಾದಷ್ಟು ಜೀವಗಳನ್ನು ಬಲಿ ಪಡೆಯಲು ಉದ್ದೇಶಿಸಿದೆ. ಆದರೆ, ಭಾರತದ ಚಾಣಾಕ್ಷ ಯೋಧರು ಪಾಕಿಸ್ತಾನದ ಈ ಹುನ್ನಾರವನ್ನು ಯಶಸ್ವಿಯಾಗಿ ವಿಫಲಗೊಳಿಸಿದ್ದಾರೆ.

Facebook Comments

Sri Raghav

Admin