ಟೆಸ್ಟ್ ಗೆ ಪಾದಾರ್ಪಣೆ ಮಾಡಿದ ಜಸ್‍ಪ್ರೀತ್ ಬೂಮ್ರಾ

ಈ ಸುದ್ದಿಯನ್ನು ಶೇರ್ ಮಾಡಿ

Bhumra

ಕೇಪ್‍ಟೌನ್, ಜ.4- ಟ್ವೆಂಟಿ-20 ಹಾಗೂ ಏಕದಿನ ಕ್ರಿಕೆಟ್‍ನಲ್ಲಿ ತನ್ನ ಬೌಲಿಂಗ್ ಮೊನಚಿನಿಂದ ಗಮನಸೆಳೆದಿರುವ ಭಾರತ ತಂಡದ ಜಸ್‍ಪ್ರೀತ್ ಬೂಮ್ರಾ ಟೆಸ್ಟ್ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ಪಿಚ್‍ಗಳು ವೇಗದ ಬೌಲರ್‍ಗಳಿಗೆ ಹೆಚ್ಚು ಸಹಕಾರಿಯಾಗಿರುವುದರಿಂದ ಜಸ್‍ಪ್ರೀತ್ ಬೂಮ್ರಾ, ಭುವನೇಶ್ವರ್‍ಕುಮಾರ್ ಸೇರಿದಂತೆ ಮೂವರು ವೇಗದ ಬೌಲರ್‍ಗಳು ಹಾಗೂ ಹಾರ್ದಿಕ್ ಪಾಂಡ್ಯಾ ಹಾಗೂ ರವಿಚಂದ್ರನ್ ಅಶ್ವಿನ್ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಿದ್ದೇನೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ವಿರಾಟ್ ಕೊಹ್ಲಿ ಉತ್ತರಿಸಿದ್ದಾರೆ. ಕಳೆದ ಬಾರಿ ಭಾರತದ ಸರಣಿಯಲ್ಲಿ ಹೀನಾಯ ಸೋಲು ಕಂಡಿರುವ ಹರಿಣಿಗಳು ಈಗ ಪ್ರತೀಕಾರ ಹೇಳಲು ಹಾತೊರೆಯುತ್ತಿದ್ದು ಇಂದಿನ ಪಂದ್ಯದಲ್ಲಿ ಬೌಲರ್‍ಗಳತ್ತಲೇ ಹೆಚ್ಚು ಗಮನ ಹರಿಸಿದ್ದು ಕಗಸಾ ರಬಾಡ, ಡೇಲ್‍ಸ್ಟೇನ್, ಫಿಲೆಂಡರ್, ಮಾರ್ನೆಮಾರ್ಕಲ್‍ರನ್ನೇ ಹೆಚ್ಚು ಅವಲಂಬಿಸಿದೆ.

ಕೆ.ಎಲ್.ರಾಹುಲ್‍ಗೆ ಕೊಕ್:
ಆರಂಭಿಕ ಆಟಗಾರ ಶಿಖರ್‍ಧವನ್ ಸಂಪೂರ್ಣವಾಗಿ ಚೇತರಿಸಿಕೊಂಡಿರುವುದರಿಂದ ಕನ್ನಡಿಗ ಕೆ.ಎಲ್.ರಾಹುಲ್‍ಗೆ ಕೊಕ್ ನೀಡಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡಿರುವ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

Facebook Comments

Sri Raghav

Admin