ಬ್ಯಾಂಕ್ ನಲ್ಲಿ ಹಿರಿಯ ಸಹಾಯಕ, ಜವಾನ ಹುದ್ದೆಗಳಿಗೆ ಅರ್ಜಿ ಅಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

basava-1
ಬಾಗಲಕೋಟೆಯ ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್ ನಿ. ದಲ್ಲಿ ಹಿರಿಯ ಸಹಾಯಕರು, ಜವಾನ / ಸಿಪಾಯಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 64
ಹುದ್ದೆಗಳ ವಿವರ
1.ಹಿರಿಯ ಸಹಾಯಕರು – 40
2.ಜವಾನ / ಸಿಪಾಯಿ – 24
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗಳಿಗೆ ಮಾನ್ಯತೆ ಹೊಂದಿರುವÀ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದಿರಬೇಕು. ಕ್ರ.ಸಂ 2ರ ಹುದ್ದೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಎರಡು ಹುದ್ದೆಗಳಿಗೂ ಕನ್ನಡ ಭಾಷೆ ಓದಲು ಮತ್ತು ಬರೆಯಲು ತಿಳಿದಿರಬೇಕು.
ವಯೋಮಿತಿ : ಸಾಮಾನ್ಯ ವರ್ಗದವರಿಗೆ ಕನಿಷ್ಠ 18 ರಿಂದ 35 ವರ್ಷ ವಯಸನ್ನು ನಿಗದಿಗೊಳಿಸಲಾಗಿದ್ದು, ಪ್ರವರ್ಗ – 2ಎ, 2ಬಿ, 3ಎ, 3ಬಿ ವರ್ಗದವರಿಗೆ ಗರಿಷ್ಠ 38 ವರ್ಷ, ಪ.ಜಾ, ಪ.ಪಂದವರಿಗೆ 40 ವರ್ಷದವರೆಗೆ ಸಡಿಲತೆ ನೀಡಲಾಗಿದೆ.
ಶುಲ್ಕ : ಕ್ರ.ಸಂ 1ರ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಮತ್ತು ಇತರ ವರ್ಗದವರಿಗೆ 600 ರೂ, ಕ್ರ.ಸಂ 2ರ ಹುದ್ದೆಗೆ 500 ರೂ ಹಾಗೂ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ.ಜಾ, ಪ.ಪಂ ದವರಿಗೆ 300 ರೂ ಶುಲ್ಕ ನಿಗದಿ ಮಾಡಿದೆ. ಈ ಶುಲ್ಕದ ಜೊತೆಗೆ ಅಂಚೆ ಕಛೇರಿ ಶುಲ್ಕ ಪಾವತಿಸುವಂತೆ ತಿಳಿಸಿದೆ. ಅಂಚೆ ಕಛೇರಿಯ ವಿದ್ಯುನ್ಮಾನ ಪಾವತಿ ಮಾಡಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11-01-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.basavabank.com ಗೆ ಭೇಟಿ ನೀಡಿ

ಅಧಿಸೂಚನೆ

notification-001 notification-002 notification-003 notification-004 notification-005 notification-006

Facebook Comments

Sri Raghav

Admin