ಮೈಸೂರಲ್ಲಿ ವಾಹನ ಸವಾರರ ಪಾಡು ಕೇಳೋರೆ ಇಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Mysuru-Police--01

ಮೈಸೂರು, ಜ.5- ಒಂದು ಕಡೆ ಪೊಲೀಸರ ಕಾಟ, ಮತ್ತೊಂದೆಡೆ ವ್ಯಾಪಾರಿಗಳಿಂದ ವಂಚನೆ. ಹಾಗಾಗಿ ನಗರದಲ್ಲಿ ವಾಹನ ಸವಾರರ ಪಾಡು ಹೇಳತೀರದಾಗಿದೆ. ನಗರದಾದ್ಯಂತ ಕಳೆದ ಎರಡು ದಿನಗಳಿಂದ ಪೊಲೀಸರು ಆಫ್ ಹೆಲ್ಮೆಟ್ ವಿರುದ್ಧ ಕಾರ್ಯಾಚರಣೆ ನಡೆಸಿ ಅವುಗಳನ್ನು ವಶಕ್ಕೆ ತೆಗೆದುಕೊಂಡು ಐಎಸ್‍ಐ ಮಾರ್ಕ್ ಇರುವ ಗುಣಮಟ್ಟದ ಹೆಲ್ಮೆಟ್‍ಗಳನ್ನೇ ಧರಿಸುವಂತೆ ವಾಹನ ಸವಾರರಿಗೆ ಸೂಚಿಸುತ್ತಿದ್ದಾರೆ.
ಪೊಲೀಸರ ಕಾರ್ಯಾಚರಣೆಯಿಂದ ಕಂಗೆಟ್ಟಿರುವ ನಗರದ ಜನ ದ್ವಿಚಕ್ರ ವಾಹನದಲ್ಲಿ ಸಂಚರಿಸುವುದೇ ಬೇಡ ಎನ್ನುವಂತಹ ಪರಿಸ್ಥಿತಿಗೆ ತಲುಪಿದ್ದಾರೆ. ಒಂದು ವೇಳೆ ಹಾಫ್ ಹೆಲ್ಮೆಟ್ ಧರಿಸಿ ಹೊರಟರೆ ಅದನ್ನು ವಶಕ್ಕೆ ಪಡೆದು ಪೊಲೀಸರು ಪೊಲೀಸರು ತಡೆದು ಐಎಸ್‍ಐ ಗುರುತು ಇರುವ ಹೆಲ್ಮೆಟ್ ಧರಿಸುವಂತೆ ಸೂಚಿಸುತ್ತಾರೆ. ಇನ್ನೊಂದೆಡೆ ಹೆಲ್ಮೆಟ್ ಖರೀದಿಸಲು ಹೋದರೆ ಅಂಗಡಿಯವರು ದುಪ್ಪಟ್ಟು ದರ ವಸೂಲಿ ಮಾಡುತ್ತಾರೆ. ಹೆಲ್ಮೆಟ್ ಕಾರ್ಯಾಚರಣೆ ಪ್ರಾರಂಭವಾಗುತ್ತಿದ್ದಂತೆ ಹೆಲ್ಮೆಟ್ ದರ ದಿಢೀರನೆ ಹೆಚ್ಚಾಗಿಬಿಟ್ಟಿದೆ.

ಜನವರಿ 1ನೆ ತಾರೀಖಿನವರೆಗೂ 700-800ರೂ. ಸಿಗುತ್ತಿದ್ದು, ಐಎಸ್‍ಐ ಮಾರ್ಕ್‍ವುಳ್ಳ ಹೆಲ್ಮೆಟ್ ದರ ಕಳೆದ ಎರಡು ದಿನಗಳಿಂದ 1200-1300ರೂ.ಗೆ ಏರಿಬಿಟ್ಟಿದೆ. ಬಹುತೇಕ ಅಂಗಡಿಗಳಲ್ಲಿ ರಶೀದಿ ಕೊಡುತ್ತಿಲ್ಲ. ಇದು ಹಲವು ಅನುಮಾನ ಮೂಡಿಸಿದ್ದು, ಐಎಸ್‍ಐ ಗೂಣಮಟ್ಟವುಳ್ಳ ಹೆಲ್ಮೆಟ್ ಅಲ್ಲವೇನೊ ಎಂದು ಶಂಕಿಸುತ್ತಿದ್ದಾರೆ. ಇದುವರೆಗೆ ಹೆಲ್ಮೆಟ್‍ಅನ್ನೇ ಐಎಸ್‍ಐ ಮಾರ್ಕ್ ಇರುತ್ತಿತ್ತು. ಕಳೆದ ಎರಡು ದಿನಗಳಿಂದ ಮಾರಾಟವಾಗುತ್ತಿರುವ ಹೆಲ್ಮೆಟ್‍ನಲ್ಲಿ ಸ್ಟಿಕ್ಕರ್‍ಗಳಲ್ಲಿ ಐಎಸ್‍ಐ ಮಾರ್ಕ್ ಇದೆ. ಕೆಲವು ಹೆಲ್ಮೆಟ್‍ನಲ್ಲಿ ಲ್ಯಾಮಿನೇಷನ್ ಮಾಡಿರುವುದು ಕಂಡುಬರುತ್ತಿದೆ. ಇವು ಡೂಪ್ಲಿಕೆಟ್ ಅನ್ನಿಸುತ್ತಿದೆ ಎಂದು ಸವಾರರು ಹೇಳುತ್ತಿದ್ದಾರೆ. ಪೊಲೀಸರ ಕಾಟ ಒಂದೆಡೆಯಾದರೆ, ಇನ್ನೊಂದೆಡೆ ಹೆಲ್ಮೆಟ್ ಬೆಲೆ ಹೆಚ್ಚಳ, ಇತ್ತ ಬಿಲ್ ನೀಡದೆ ಇರುವುದು ಜತೆಗೆ ಡೂಪ್ಲಿಕೆಟ್ ಹೆಲ್ಮೆಟ್‍ಗಳ ಮಾರಾಟ ಹಾಗಾಗಿ ವಾಹನ ಸವಾರರ ಗೋಳು ಹೇಳಲಾಗುತ್ತಿಲ್ಲ.

ಈ ಬಗ್ಗೆ ವಾಣಿಜ್ಯ ತೆರಿಗೆ ಅಧಿಕಾರಿಯೊಬ್ಬರನ್ನು ಈ ಸಂಜೆ ಪತ್ರಿಕೆ ಮಾತನಾಡಿಸಿದಾಗ ಜಿಎಸ್‍ಟಿ ನೋಂದಣಿ ಸಂಖ್ಯೆ ಇರುವ ಬಿಲ್ ಕೊಡಬೇಕು. ಸದ್ಯದಲ್ಲೇ ಬಿಲ್ ಕೊಡದ ಅಂಗಡಿಗಳವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರರಾವ್ ಪ್ರಕಟಣೆ ಹೊರಡಿಸಿ ಹೆಚ್ಚು ಬೆಲೆಗೆ ಹೆಲ್ಮೆಟ್ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದಾರೆ. ಐಎಸ್‍ಐ ಮಾರ್ಕ್‍ವುಳ್ಳ ಹೆಲ್ಮೆಟ್ ಸ್ಟಾಕ್ ಇಲ್ಲದ ಕಾರಣ ನಾಳೆ ಸಂಜೆವರೆಗೆ ಮಾತ್ರ ಆಫ್ ಹೆಲ್ಮೆಟ್ ಧರಿಸಿ ಓಡಾಡುವವರಿಗೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

Facebook Comments

Sri Raghav

Admin