ಆರ್ಥಿಕ ಜ್ಞಾನವಿಲ್ಲದ ಮೋದಿ-ಜೇಟ್ಲಿಯಿಂದ ದೇಶದ ಪ್ರಗತಿಗೆ ವಿಘ್ನ : ಕಾಂಗ್ರೆಸ್ ಕಟುಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

Randeep-Surjewala-02

ನವದೆಹಲಿ, ಜ.6-ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಆರ್ಥಿಕ ಜ್ಞಾನವಿಲ್ಲ ಎಂದು ಟೀಕಿಸಿರುವ ಕಾಂಗ್ರೆಸ್, ಇದರಿಂದಾಗಿ ದೇಶದ ಪ್ರಗತಿಗೆ ದೊಡ್ಡ ವಿಪ್ಲವ ಹೊಡೆತ ಬಿದ್ದಿದೆ ಎಂದು ಆರೋಪಿಸಿದೆ. ಮೋದಿ ನಿರ್ಮಿತ ಅಮಾನೀಕರಣ ವಿಪತ್ತು ಮತ್ತು ದೋಷಪೂರಿತ ಜಿಎಸ್‍ಟಿ ಈ ಎರಡು ಕೇಡುಗಳಿಂದ ದೇಶದ ಆರ್ಥಿಕತೆ ದೊಡ್ಡ ಮಟ್ಟದಲ್ಲಿ ಕುಂಠಿತವಾಗಿದೆ ಎಂದು ಕಾಂಗ್ರೆಸ್‍ನ ಮಾಹಿತಿ ವಿಭಾಗದ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅಪಾಧಿಸಿದ್ದಾರೆ.

ಅಹಂಭಾವದ ಪ್ರಧಾನಿ ಮತ್ತು ವಿಫಲಗೊಂಡಿರುವ ಹಣಕಾಸು ಸಚಿವರಿಗೆ ಆರ್ಥಿಕತೆಯ ಲೋಕಜ್ಞಾನ ಇಲ್ಲವೇ ಇಲ್ಲ. ಇತ್ತೀಚಿನ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಶೇ.7.3 ರಿಂದ ಶೇ.6.5ಕ್ಕೆ ಇಳಿಮುಖವಾಗಿದೆ. ಇದು ಭಾರತಕ್ಕೆ ಬಿದ್ದಿರುವ ದೊಡ್ಡ ಹೊಡೆತಕ್ಕೆ ಸಾಕ್ಷಿಯಾಗಿದೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin