ಈಗ ಎಲ್ಲ ಆಯ್ಕೆಗಳು ಪಾಕ್ ಮುಂದಿವೆ : ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

Pakistan-America

ವಾಷಿಂಗ್ಟನ್, ಜ.6-ಭಯೋತ್ಪಾದನೆ ನಿಗ್ರಹದಲ್ಲಿ ವಿಫಲವಾಗಿರುವ ಪಾಕಿಸ್ತಾನಕ್ಕೆ ಸುಮಾರು 73,000 ಕೋಟಿ ರೂ.ಗಳ ಭದ್ರತಾ ನೆರವು ಸ್ಥಗಿತಗೊಳಿಸಿ ದೊಡ್ಡ ಹೊಡೆತ ನೀಡಿರುವ ಅಮೆರಿಕ ಇಸ್ಲಾಮಾಬಾದ್‍ಗೆ ಈಗ ಕಟ್ಟಕಡೆಯ ಅವಕಾಶ ನೀಡಿದೆ. ತಾಲಿಬಾನ್ ಮತ್ತು ಹಖ್ಖಾನಿ ಉಗ್ರಗ್ರಾಮಿ ಜಾಲದ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಭಯೋತ್ಪಾದಕರಿಗೆ ಪಾಕಿಸ್ತಾನವು ಸುರಕ್ಷಿತ ಸ್ವರ್ಗವಾಗಲು ಅವಕಾಶ ನೀಡಬಾರದೆಂದು ಪುನರ್ ಆಗ್ರಹಿಸಿರುವ ಅಮೆರಿಕ, ಈಗ ಎಲ್ಲ ಆಯ್ಕೆಗಳು ಪಾಕಿಸ್ತಾನದ ಮೇಜಿನ ಮೇಲಿದೆ. ಯಾವುದನ್ನು ಬೇಕಾದರೂ ಅದು ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ಅಮೆರಿಕ ಎಲ್ಲ ಐಚ್ಚಿಕಗಳನ್ನು ಪಾಕಿಸ್ತಾನದ ಮುಂದೆ ಇಟ್ಟಿದೆ. ತಾಲಿಬಾನ್ ಮತ್ತು ಹಖ್ಖಾನಿ ಉಗ್ರಗ್ರಾಮಿಗಳ ನಿಗ್ರಹಕ್ಕೆ ನಿರ್ಣಾಯಕ ಕ್ರಮಗಳನ್ನು ಪಾಕಿಸ್ತಾನ ಕೈಗೊಳ್ಳಬೇಕು ಹಾಗೂ ಭಯೋತ್ಪಾದಕರಿಗೆ ಪಾಕಿಸ್ತಾನವು ಸುರಕ್ಷಿತ ಸ್ವರ್ಗವಾಗಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದೆಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

Facebook Comments

Sri Raghav

Admin