ಕರ್ನಾಟಕದಿಂದ ಆಮದು ರದ್ದು ಮಾಡಿದ್ದರಿಂದ ಗೋವಾದಲ್ಲಿ ಗೋ ಮಾಂಸ ಅಭಾವ

ಈ ಸುದ್ದಿಯನ್ನು ಶೇರ್ ಮಾಡಿ

Meat--02

ಪಣಜಿ, ಜ.6-ಗೋರಕ್ಷಕರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟದಿಂದ ಬೀಫ್ ಆಮದು ಮಾಡಿಕೊಳ್ಳುವುದನ್ನು ವ್ಯಾಪಾರಿಗಳು ನಿಲ್ಲಿಸಿರುವುದರಿಂದ ಕರಾವಳಿ ರಾಜ್ಯ ಗೋವಾದಲ್ಲಿ ಗೋ ಮಾಂಸ ಅಭಾವ ಉಂಟಾಗಿದೆ. ಕರ್ನಾಟಕದ ಬೆಳಗಾವಿಯಿಂದ ದನದ ಮಾಂಸ ಪಡೆಯುವುದನ್ನು ತನ್ನ ಸದಸ್ಯರು ನಿಲ್ಲಿಸಿದ್ದಾರೆ ಎಂದು ವರ್ತಕರ ಸಂಘ ತಿಳಿಸಿದೆ.

ಗೋರಕ್ಷಕರು ಮತ್ತು ಹಿಂದು ಸಂಘಟನೆಗಳ ಕಾರ್ಯಕರ್ತರಿಂದಿ ಕಿರುಕುಳ ನಿಲ್ಲಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವ ತನಕ ಇದು ಮುಂದುವರಿಯುತ್ತದೆ ಎಂದು ಅಲ್ ಗೋವಾ ಖುರೇಷಿ ಮೀಟ್ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಮನ್ನಾ ಬೆಪಾರಿ ತಿಳಿಸಿದ್ದಾರೆ. ಕ್ರಿಸ್ಮಸ್ ಸಂದರ್ಭದಿಂದಲೂ ರಾಜ್ಯದಲ್ಲಿ ಗೋರಕ್ಷಕರ ದೌರ್ಜನ್ಯ ಹೆಚ್ಚಾಗುತ್ತಿದೆ. ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ನೆಪವೊಡ್ಡಿ ಮಾಂಸ ಸಾಗಣೆ ಟ್ರಕ್‍ಗಳನ್ನು ತಡೆದು ಅವರನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ಬೀಫ್‍ನನ್ನು ಕರ್ನಾಟಕದಿಂದ ಆಮದು ಮಾಡಿಕೊಳ್ಳದಿರಲು ನಾವು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin