ಕಾಶ್ಮೀರದಲ್ಲಿ 10 ಸ್ಮಗ್ಲರ್‍ಗಳ ಸೆರೆ, 7 ಕೋಟಿ ಹೆರಾಯಿನ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

Kashmir-Police-c

ಜಮ್ಮು, ಜ.6-ಉಗ್ರರ ಹಿಂಸಾಚಾರದಿಂದ ನಲುಗುತ್ತಿರುವ ಕಾಶ್ಮೀರ ಕಣಿವೆ ಮಾದಕ ವಸ್ತುಗಳ ಕಳ್ಳಸಾಗಣೆ ತಾಣವಾಗುತ್ತಿದೆ. ಜಮ್ಮು ಮತ್ತು ಸಾಂಬಾ ಜಿಲ್ಲೆಗಳ ಲ್ಲಿ 10 ಡ್ರಗ್ಸ್ ಸ್ಮಗ್ಲರ್‍ಗಳು ಮತ್ತು ಮಾರಾಟಗಾರರನ್ನು ಬಂಧಿಸಿರುವ ಪೊಲೀಸರು 7 ಕೋಟಿ ರೂ. ಮೌಲ್ಯ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಜಮ್ಮುವಿನ ಅಕ್ನೂರ್ ಗಡಿಯಲ್ಲಿ ಮಾದಕ ವಸ್ತು ಕಳ್ಳಸಾಗಣೆದಾರರ ಜಾಲವನ್ನು ಪೊಲೀಸರು ಭೈೀದಿಸಿದ್ದಾರೆ. ಪಾಕಿಸ್ತಾನದಿಂದ ಕಳ್ಳಸಾಗಣೆಯಾಗುತ್ತಿದ್ದ 7 ಕೆಜಿ ಹೆರಾಯಿನ್‍ನನ್ನು ವಶಪಡಿಸಿಕೊಳ್ಳಲಾಗಿದ್ದು, ಐವರನ್ನು ಬಂಧಿಸಲಾಗಿದೆ ಎಂದು ಐಜಿಪಿ(ಜಮ್ಮು) ಎಸ್.ಡಿ.ಸಿಂಗ್ ಜಾಮ್‍ವಾಲ್ ತಿಳಿಸಿದ್ದಾರೆ.

ಈ ಸಂಬಂಧ ಅಕ್ನೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನೆರಡು ಪ್ರಕರಣಗಳಲ್ಲಿ ಜಮ್ಮುವಿನಲ್ಲಿ ಗಾಂಧಿನಗರ ಪೊಲೀಸರು ಮಾಜಿ ಪೇದೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ ಹಾಗೂ ಸಾಂಬಾದಲ್ಲಿ ಮತ್ತೊಬ್ಬ ಡ್ರಗ್ಸ್ ಮಾರಾಟಗಾರರನ್ನು ಸೆರೆ ಹಿಡಿದು ಅಪೀಮು ವಶಪಡಿಸಿಕೊಳ್ಳಲಾಗಿದೆ.

Facebook Comments

Sri Raghav

Admin