ಕಾಶ್ಮೀರದ ಗಡಿ ನಿವಾಸಿಗಳ ರಕ್ಷಣೆಗೆ ಬರಲಿವೆ 5,390 ಬಂಕರ್‍ಗಳು

ಈ ಸುದ್ದಿಯನ್ನು ಶೇರ್ ಮಾಡಿ

Bunkers--02

ಜಮ್ಮು, ಜ.6-ಪಾಕಿಸ್ತಾನ ಸೇನಾಪಡೆಗಳಿಂದ ಪದೇ ಪದೇ ಅಪ್ರಚೋದಿತ ಬಂದೂಕು ಮತ್ತು ಶೆಲ್ ದಾಳಿಗಳಿಂದ ಕಾಶ್ಮೀರ ಕಣಿವೆಯ ಗಡಿ ಗ್ರಾಮದ ನಿವಾಸಿಗಳಿಗೆ ರಕ್ಷಣೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ರಜೌರಿ ಜಿಲ್ಲೆಯಲ್ಲಿ 5,390 ಬಂಕರ್‍ಗಳನ್ನು(ಕಂದಕದಲ್ಲಿ ಸುರಕ್ಷಿತ ಅಡಗುದಾಣ) ಒದಗಿಸಲಿದೆ. 100 ಬಂಕರ್‍ಗಳನ್ನು ನಿರ್ಮಿಸುವ ಜೊತೆಗೆ 4,918 ವೈಯಕ್ತಿಕ ಮತ್ತು 372 ಸಮುಚಾಯ ಬಂಕರ್‍ಗಳನ್ನು ಒದಗಿಸಲು ಸರ್ಕಾರ ಯೋಜನೆ ರೂಪಿಸಿದೆ ಎಂದು ರಜೌರಿ ಜಿಲ್ಲಾ ಅಭಿವೃದ್ಧಿ ಆಯುಕ್ತ ಶಾಹೀದ್ ಇಕ್ಬಾಲ್ ಚೌಧರಿ ಹೇಳಿದ್ದಾರೆ.

ಪ್ರತಿ ಸಮುದಾಯ ಬಂಕರ್‍ಗಳು 800 ಚದರ ಅಡಿಗಳ ಅಳತೆ ಹೊಂದಿರಲಿದ್ದು, 40 ಮಂದಿಗೆ ಅವಕಾಶ ನೀಡಲಿದೆ. 60 ಚದರ ಅಡಿ ವಿಸ್ತೀರ್ಣದ ವೈಯಕ್ತಿಕ ಬಂಕರ್‍ಗಳಲ್ಲಿ ಎಂಟು ಮಂದಿ ಸುರಕ್ಷಿತವಾಗಿ ಆಶ್ರಯ ಪಡೆಯಬಹುದಾಗಿದೆ ಎಂದು ಅವರು ವಿವರಿಸಿದ್ದಾರೆ. ಈ ಯೋಜನೆಯಿಂದ ಜಿಲ್ಲೆಯಲ್ಲಿ 54,000 ಮಂದಿಗೆ ಸುರಕ್ಷಿತ ಸ್ಥಳಾವಕಾಶ ಕಲ್ಪಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin