ಕೇಪ್‍ಟೌನ್‍ ಸ್ಟೇಡಿಯಂನಲ್ಲಿ ಮಿಂಚಿದ ಕ್ರಿಕೆಟಿಗರ ಪತ್ನಿಯರು

ಈ ಸುದ್ದಿಯನ್ನು ಶೇರ್ ಮಾಡಿ

Cricket

ಕೇಪ್‍ಟೌನ್, ಜ.6-ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‍ಟೌನ್‍ನಲ್ಲಿ ಭಾರತ ಕ್ರಿಕೆಟ್ ತಂಡ ಮೊದಲ ಟೆಸ್ಟ್ ಪಂದ್ಯ ಅರಂಭಿಸಿದ್ದು, ನ್ಯೂಲ್ಯಾಂಡ್ ಸ್ಟೇಡಿಯಂನಲ್ಲಿ ಸ್ಟಾರ್ ಕ್ರಿಕೆಟ್ಟಿಗರ ಪತ್ನಿಯರು ಗಮನ ಸೆಳೆಯುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಇತ್ತೀಚೆಗಷ್ಟೇ ವಿವಾಹವಾಗಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕ್ರೀಡಾಂಗಣದ ವಿಐಪಿ ಗ್ಯಾಲರಿಯಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಅಲ್ಲದೇ ವಿರಾಟ್ ಮತ್ತು ಭಾರತೀಯ ತಂಡವನ್ನು ಹುರಿದುಂಬಿಸಿ ಗಮನಸೆಳೆಯುತ್ತಿದ್ದಾರೆ.

ಇತ್ತೀಚೆಗೆ ನವದಾಂಪತ್ಯಕ್ಕೆ ಕಾಲಿಟ್ಟ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಪತ್ನಿ ನೂಪರ್‍ನಗರ್ ಕೂಡ ಅನುಷ್ಕಾ ಪಕ್ಕದಲ್ಲಿ ಕುಳಿತು ಎಲ್ಲರನ್ನು ಆಕರ್ಷಿಸಿದರು. ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ಶಿಖರ್ ಧವನ್ ಮಡದಿ ಆಯೇಷಾ ಮತ್ತು ರೋಹಿತಾ ಶರ್ಮ ಸತಿ ರಿತಿಕಾ ಸಚ್‍ದೇವ್ ಸಹ ಇವರ ಜೊತೆಯಲ್ಲೇ ಕಂಡುಬಂದರು ಪ್ರೇಕ್ಷಕರ ಗಮನಸೆಳೆದರು.

#virushka

A post shared by virat kohli club (@virat_kohli_c_l_u_b_) on

Facebook Comments

Sri Raghav

Admin