ಕೇರಳದ ಕೊಚ್ಚಿಯಲ್ಲಿ ಆನ್‍ಲೈನ್ ಸೆಕ್ಸ್ ರಾಕೆಟ್ : 14 ಜನ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Sex-Rockt

ಕೊಚ್ಚಿ, ಜ.6-ಕೇರಳದ ಕೊಚ್ಚಿಯಲ್ಲಿ ಆನ್‍ಲೈನ್ ಸೆಕ್ಸ್ ರಾಕೆಟ್ ಜಾಲವನ್ನು ಭೇದಿಸಿರುವ ಪೊಲೀಸರು ದೆಹಲಿ ಮೂಲದ ಸೂತ್ರಧಾರಿ ಮಹಿಳೆ ಸೇರಿದಂತೆ 14 ಮಂದಿಯನ್ನು ಬಂಧಿಸಿದ್ದಾರೆ. ವೆಬ್‍ಸೈಟ್‍ನಲ್ಲಿ ಗಿರಾಕಿಗಳನ್ನು ಕುದುರಿಸಿ ಅನ್‍ಲೈನ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಲದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿ ನಿನ್ನೆ ವಸತಿಗೃಹವೊಂದರ ಮೇಲೆ ದಾಳಿ ನಡೆಸಿ 14 ಜನರನ್ನು ಬಂಧಿಸಿದರು. ಈ ವ್ಯವಸ್ಥಿತ ಜಾಲ ಕಿಂಗ್‍ಪಿನ್ ಮಹಿಳೆಯಲ್ಲದೇ ಐವರು ಮಹಿಳೆಯರು, ನಾಲ್ವರು ಅಂತರ್‍ಲಿಂಗಿಗಳು, ಮೂವರು ಗ್ರಾಹಕರು ಮತ್ತು ಲಾಡ್ಜ್ ಮ್ಯಾನೇಜರ್‍ನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin