ಜೆಡಿಎಸ್‍ಗೆ ಬಹುಮತ ಖಚಿತ, ಕುಮಾರಸ್ವಾಮಿ ಸಿಎಂ ಆಗುವುದು ಗ್ಯಾರಂಟಿ : ಮಧು ಬಂಗಾರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

madhu

ಕೆಆರ್ ನಗರ, ಜ.6- 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ವಷ್ಟ ಬಹುಮತದೊಂದಿಗೆ ಜೆಡಿಎಸ್ ಅಧಿಕಾರದ ಗದ್ದುಗೆ ಏರಲಿದ್ದು, ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಖಚಿತ ಎಂದು ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ಮಧುಬಂಗಾರಪ್ಪ ಹೇಳಿದರು. ಪಟ್ಟಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಯುವ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು. ಈ ಸರ್ಕಾರ ರೈತರ ಆತ್ಮಹತ್ಯೆ ಭಾಗ್ಯ, ಅಮಾಯಕರ ಹತ್ಯೆಯ ಭಾಗ್ಯ ನೀಡಿದೆ. ಅಭಿವೃದ್ಧಿ ಭಾಗ್ಯ ಜನರಿಗೆ ಕೊಟ್ಟಿಲ್ಲ. ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಿ ಜನರಿಗೆ ಸಾಲದ ಭಾಗ್ಯ ನೀಡಿದೆ ಅಷ್ಟೇ. ಕೇಂದ್ರ ಸರ್ಕಾರ ರಾಜ್ಯಗಳ ಅಭಿವೃದ್ಧಿಗೆ ಕೊಡುಗೆ ನೀಡದೆ ಜನ ಸಾಮಾನ್ಯರ ಮೇಲೆ ನೋಟು ಅಮಾನ್ಯ, ಜಿಎಸ್‍ಟಿ ಹೊರೆ ನೀಡಿ ದೇಶದ ಬೆನ್ನೆಲುಬು ರೈತರ ಬಗ್ಗೆ ಯಾವುದೆ ಯೋಜನೆಗಳನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ 20 ತಿಂಗಳ ಆಡಳಿತವನ್ನು ಜನರು ಇನ್ನೂ ಮರೆತಿಲ್ಲ. ಎಲ್ಲೆಡೆ ಅವರ ಪರ ಅಲೆ ಇದೆ. ಜೆಡಿಎಸ್ ಅಧಿಕಾರಕ್ಕೆ ಬರಲಿದೆ, ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.   ಇಡೀ ರಾಜ್ಯದಲ್ಲಿ ಶಾಸಕ ಸಾ.ರಾ.ಮಹೇಶ್ ಅವರಂಥ ನಾಯಕರಿದ್ದರೆ ಅಭಿವೃದ್ಧಿ ಪರ್ವವಾಗಲಿದೆ ಎಂದು ಹೇಳಿದರು. ಶಾಸಕ ಸಾ.ರಾ.ಮಹೇಶ್ ಮಾತನಾಡಿ, ರಾಜ್ಯ ಸರ್ಕಾರ ಸಾಲದ ಹೊರೆಯಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಡಾ.ಅಂಬೇಡ್ಕರ್ ಪ್ರತಿಮೆಯಿಂದ ಸಾವಿರಾರು ಯುವ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು.

ಪುರಸಭಾ ಅಧ್ಯಕ್ಷೆ ಕವಿತಾ ವಿಜಯಕುಮಾರ್, ಜಿಪಂ ಸದಸ್ಯ ಅಮಿತ್‍ವಿ.ದೇವತಹಟ್ಟಿ, ಡಾ.ಮೇಹಬೂಬ್‍ಖಾನ್ ಮಾಜಿ ಸದಸ್ಯ ಹರದನಹಳ್ಳಿ ವಿಜಯಕುಮಾರ್, ಸಿ.ಜೆ.ದ್ವಾರಕೀಶ್, ಯುವ ಘಟಕದ ತಾಲೂಕು ಅಧ್ಯಕ್ಷ ಮಧುಚಂದ್ರ, ಹರಿ ಚಿದಂಬರ್, ಯುವ ಮುಖಂಡ ಸಂತೋಷ್‍ಗೌಡ ಮತ್ತಿತರರಿದ್ದರು.

Facebook Comments

Sri Raghav

Admin