ದೆಹಲಿಯ ಏರ್ಪೋರ್ಟ್ ನಲ್ಲಿ ಜ.18ರಿಂದ 26ರವರೆಗೆ ಬೆಳಗಿನ ಸಮಯ ವಿಮಾನ ಹಾರಾಟ ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

Pkane--02

ನವದೆಹಲಿ,ಜ.6-ಗಣರಾಜ್ಯೋತ್ಸವ ಸಂದರ್ಭದಲ್ಲಿ ವೈಮಾನಿಕ ಪ್ರದರ್ಶನದ ತರಬೇತಿ ನಡೆಸಬೇಕಾದ ಹಿನ್ನೆಲೆಯಲ್ಲಿ ಇದೇ 18ರಿಂದ 26ರವರೆಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗಿನ ಸಮಯ ವಿಮಾನ ಹಾರಾಟ ರದ್ದಾಗಲಿದೆ. ಬೆಳಗ್ಗೆ 10.30ರಿಂದ 12.15ರವರೆಗೆ ವಿದೇಶದಿಂದ ಆಗಮಿಸುವ ಹಾಗೂ ದೇಶದ ವಿವಿಧ ಭಾಗಗಳಿಗೆ ಹಾರಾಟ ನಡೆಸುವ ಒಂದು ಸಾವಿರಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ರದ್ದುಪಡಿಸಲು ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಚಿಂತನೆ ನಡೆಸಿದೆ.

ಜ.26ರಂದು ನವದೆಹಲಿಯ ವಿಜಯ್‍ಚೌಕ್‍ನಲ್ಲಿ ಪ್ರತಿ ವರ್ಷ ಗಣರಾಜ್ಯೋತ್ಸವದ ಪ್ರಯುಕ್ತ ಏರ್ ಶೋ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ 18ರಿಂದ 25ರವರೆಗೆ ದೆಹಲಿಯಲ್ಲಿ ಅಭ್ಯಾಸ ನಡೆಸಬೇಕಾಗುತ್ತದೆ. 18ರಿಂದ 26ರವರೆಗು ವಿಮಾನಗಳ ಹಾರಾಟ ವ್ಯತ್ಯಯವಾಗಲಿದ್ದು , ಪ್ರಯಾಣಿಕರು ಸಹಕರಿಸಬೇಕೆಂದು ಕೋರಲಾಗಿದೆ.  ಈ ಸಂಬಂಧ ಭಾರತೀಯ ನಾಗರಿಕ ವಿಮಾನಯಾನ ಪ್ರಾಧಿಕಾರ ಹಾಗೂ ದೆಹಲಿ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ಒಪ್ಪಂದ ಮಾಡಿಕೊಂಡಿದ್ದು, ದೇಶೀಯ ವಿಮಾನಗಳ ಹಾರಾಟವನ್ನು ರದ್ದುಪಡಿಸಲು ಸೂಚಿಸಲಾಗಿದೆ.

ಇದರಿಂದ ಕನಿಷ್ಟ 15ರಿಂದ 20 ಸಾವಿರ ಪ್ರಯಾಣಿಕರಿಗೆ ವ್ಯತ್ಯಯವಾಗಲಿದೆ ಎಂದು ನಾಗರಿಕ ವಿಮಾನಯಾನ ಇಲಾಖೆ ಮೂಲಗಳು ತಿಳಿಸಿವೆ.
ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೆಲವು ಭಯೋತ್ಪಾದನೆ ಸಂಘಟನೆಗಳು ದುಷ್ಕøತ್ಯ ನಡೆಸಲು ಹೊಂಚು ಹಾಕುತ್ತವೆ. ಈ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಬೇಕಾಗುವುದು ಅನಿವಾರ್ಯವಾಗುತ್ತದೆ.  ಏರ್ ಶೋ ಜತೆಗೆ ಭದ್ರತೆಯ ಕಾರಣವೂ ಕೂಡ ವಿಮಾನಗಳ ಹಾರಾಟಕ್ಕೆ ರದ್ದುಪಡಿಸಲು ಪ್ರಮುಖ ಕಾರಣವಾಗಿದೆ. ಪಾಕ್ ಮೂಲದ ಉಗ್ರರು ಕಠ್ಮಂಡುವಿನಿಂದ ವಿಮಾನವನ್ನು ಅಪಹರಿಸಿದ ಬಳಿಕ ಗಣರಾಜ್ಯೋತ್ಸವದ ವೇಳೆ ಭಾರೀ ಭದ್ರತೆಯನ್ನು ಕೈಗೊಳ್ಳಲಾಗುತ್ತಿದೆ.

Facebook Comments

Sri Raghav

Admin