ನಾಗವಲ್ಲಿ ವರ್ಸಸ್ ಆಪ್ತಮಿತ್ರರು ಚಿತ್ರದ ಗಾನ ಬಜಾನ

ಈ ಸುದ್ದಿಯನ್ನು ಶೇರ್ ಮಾಡಿ

aptamitraru

ಸನ್‍ಶೈನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಶ್ವೇತಾ ಅರುಣ್ ನಿರ್ಮಿಸುತ್ತಿ ರುವ ನಾಗವಲ್ಲಿ ವರ್ಸಸ್ ಆಪ್ತಮಿತ್ರರು ಚಿತ್ರದ ಪ್ರಥಮ ಪ್ರತಿ ರೆಡಿಯಾಗಿದ್ದು, ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿ ಬಿಡುಗಡೆಗೆ ಹಸಿರು ನಿಶಾನೆ ತೋರಿಸಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಮತ್ತು ವೀಡಿಯೋ ಸಾಂಗ್ ಬಿಡುಗಡೆ ಮಾಡಿದೆ. ಆಪ್ತಮಿತ್ರ ಮತ್ತು ಆಪ್ತರಕ್ಷಕ ಚಿತ್ರಗಳ ಬಳಿಕ ನಡೆದ ಒಂದಷ್ಟು ಘಟನೆಗಳನ್ನು ಚಿತ್ರದ ಕಥಾಹಂದರವಾಗಿ ಇಟ್ಟುಕೊಂಡು, ವಿಷ್ಣುವರ್ಧನ್ ಹಾಗೂ ಸೌಂದರ್ಯ ಅವರ ಸಾವಿಗೂ ನಾಗವಲ್ಲಿಗೂ ಏನಾದರೂ ಸಂಬಂಧವಿದೆಯೇ.. ಇಲ್ಲವೇ ಎಂಬ ಪ್ರಶ್ನೆಗಳಿಗೆ ಈ ಚಿತ್ರದ ಮೂಲಕ ತಾರ್ಕಿಕ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ ಎನ್ನುತ್ತದೆ ಚಿತ್ರತಂಡ.

ನಾಗವಲ್ಲಿ ವರ್ಸಸ್ ಆಪ್ತಮಿತ್ರರು ಚಿತ್ರದ ಟ್ರೇಲರ್ ಮತ್ತು ವೀಡಿಯೋ ಸಾಂಗ್ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ನಿರ್ದೇಶಕ ಶಂಕರ್ ಅರುಣ್, ಸಪ್ನೋಂಕಿ ರಾಣಿ ನನ್ನ ನಿರ್ದೇಶನದ ಮೊದಲ ಸಿನಿಮಾ. ಆ ಸಿನಿಮಾ ನಿರೀಕ್ಷಿತ ಗೆಲುವು ಸಾಧಿಸಲಿಲ್ಲ. ಆ ನಂತರ ವಿಭಿನ್ನವಾದ ಕಥಾ ಹಂದರವನ್ನು ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂದುಕೊಂಡಾಗ ಹೊಳೆದಿದ್ದೆ ಈ ಸಿನಿಮಾ. ಮೊದಲು ಚಿತ್ರಕ್ಕೆ ಆಪ್ತಮಿತ್ರ-2 ಎಂಬ ಟೈಟಲ್ ಇಟ್ಟಿದ್ದೆವು. ಆದರೆ ಆ ಟೈಟಲ್ ಅದಾಗಲೇ ರಿಜಿಸ್ಟರ್ ಆಗಿದ್ದ ಕಾರಣ ಅನಿವಾರ್ಯವಾಗಿ ಅದನ್ನು ಬದಲಾಯಿಸಿ ಕಥೆಗೆ ಹೊಂದಿಗೆಯಾಗುವಂತಹ ನಾಗವಲ್ಲಿ ವರ್ಸಸ್ ಆಪ್ತಮಿತ್ರರು ಎಂಬ ಟೈಟಲ್ ಇಡಬೇಕಾಯಿತು. ಅಂತಿಮವಾಗಿ ನಾವಂದುಕೊಂಡ ರೀತಿ ಸಿನಿಮಾ ಮೂಡಿಬಂದಿದ್ದು ಪ್ರೇಕ್ಷಕರಿಗೆ ಇಷ್ಟವಾಗು ವುದೆಂಬ ನಂಬಿಕೆ ಇದೆ ಎಂದರು.
ಚಿತ್ರದ ನಾಯಕ ನಟ ವಿಕ್ರಮ್ ಕಾರ್ತಿಕ್ ಮಾತನಾಡಿ, ಈ ಸಿನಿಮಾದಲ್ಲಿ ಎರಡು ಶೇಡ್ ಇರುವ ಪಾತ್ರವನ್ನು ನಿರ್ವಹಿಸಿದ್ದೇನೆ. ಲವರ್‍ಬಾಯ್ ಆಗಿ, ಪ್ರೆಸ್ ರಿಪೋರ್ಟರ್ ಆಗಿ, ರಾಜನಾಗಿ ಕಾಣಿಸಿಕೊಂಡಿದ್ದೇನೆ. ಈ ಥರದ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿರುವುದಕ್ಕೆ ನಾನು ಖುಷಿಯಾಗಿದ್ದೇನೆ ಎಂದರು.

ನಾಯಕಿ ನಟಿ ವೈಷ್ಣವಿ ಚಂದ್ರನ್ ಮಾತನಾಡಿ, ನನಗೆ ಮೊದಲೆಲ್ಲಾ ಆಧ್ಯಾತ್ಮ, ದೇವರು ಈ ಥರದ ವಿಷಯಗಳಲ್ಲಿ ಅಷ್ಟಾಗಿ ನಂಬಿಕೆ ಇರಲಿಲ್ಲ. ಆದರೆ ಈ ಸಿನಿಮಾದಲ್ಲಿ ಅಭಿನಯಿಸಿದ ಬಳಿಕ ಅದರ ಮೇಲೆ ನಂಬಿಕೆ ಹೆಚ್ಚಾಗಿದೆ. ನಟಿಯಾಗಿ ನನ್ನ ಅಭಿನಯಕ್ಕೆ ತುಂಬಾ ಸ್ಕೋಪ್ ಇರುವ ಪಾತ್ರ ಈ ಸಿನಿಮಾದಲ್ಲಿದೆ. ಸೈಕಾಲಜಿ ರಿಸರ್ಚ್ ಸ್ಟುಡೆಂಟ್ ಪಾತ್ರ ಮಾಡಿದ್ದೇನೆ. ಇಡೀ ಸಿನಿಮಾ ಒಂದೊಳ್ಳೆ ಎಕ್ಸ್‍ಪೀರಿಯನ್ಸ್ ನೀಡಿದೆ ಎಂದರು. ಇನ್ನು ಸಮಾರಂಭದಲ್ಲಿ ವೇದಿಕೆ ಮೇಲೆ ಹಾಜರಿದ್ದ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಚಿತ್ರದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ನಾಗವಲ್ಲಿ ವರ್ಸಸ್ ಆಪ್ತಮಿತ್ರರು ಚಿತ್ರದಲ್ಲಿ ಒಟ್ಟು ನಾಲ್ಕು ಹಾಡು ಗಳಿದ್ದು ಉತ್ತಮ್ ರಾಜ್ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಶ್ಯಾಮ್ ಛಾಯಾಗ್ರಹಣ ಮತ್ತು ದುರ್ಗಾ ಪ್ರಸಾದ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.

Facebook Comments

Sri Raghav

Admin