ರೈಲ್ವೆ ಸೇತುವೆ ಕೆಳಗೆ ಸ್ಫೋಟಕಗಳು ಪತ್ತೆ, ತಪ್ಪಿತು ಭಾರೀ ವಿಧ್ವಂಸಕ ಕೃತ್ಯ

ಈ ಸುದ್ದಿಯನ್ನು ಶೇರ್ ಮಾಡಿ

Train--02

ತಿರುವನಂತಪುರಂ, ಜ.6-ಕೇರಳದಲ್ಲಿ ಭಾರೀ ವಿಧ್ವಂಸಕ ಕೃತ್ಯವೊಂದನ್ನು ಪೊಲೀಸರು ಸಮಯಪ್ರಜ್ಞೆಯಿಂದ ತಪ್ಪಿಸಿದ್ದಾರೆ. ಮಳ್ಳಪುರಂ ಜಿಲ್ಲೆಯ ಭರತಪ್ಪುಳದಲ್ಲಿನ ಕುಟ್ಟಿಪುರಂ ರೈಲ್ವೆ ಸೇತುವೆ ಕೆಳಗೆ ದುಷ್ಕರ್ಮಿಗಳು ಅಡಗಿಸಿಟ್ಟಿದ್ದ ಬಾಂಬ್‍ಗಳು ಮತ್ತು ನೆಲಬಾಂಬ್‍ಗಳನ್ನು ಪೊಲೀಸರು ನಿನ್ನೆ ಸಂಜೆ ಪತ್ತೆ ಮಾಡಿದರು. ನಂತರ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಅವುಗಳನ್ನು ನಿಷ್ಕ್ರಿಯಗೊಳಿಸಿ ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದರು. ಕಮ್ಯೂನಿಸ್ಟ್ ಆಳ್ವಿಕೆ ಇರುವ ಚೀನಾಗಿಂತಲೂ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್ ಸಾಮ್ರಾಜ್ಯಶಾಹಿ ಅಮೆರಿಕಕ್ಕೆ ಸಮರ್ಥ ಪ್ರತಿರೋಧ ಒಡ್ಡಿದ್ದಾರೆ ಎಂದು ಹಿರಿಯ ಸಿಪಿಐ(ಎಂ) ನಾಯಕ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೆಚ್ಚುಗೆ ಸೂಚಿಸಿದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ.

Facebook Comments

Sri Raghav

Admin