‘ಲಿಂಗಾಯಿತ’ ಮತಗಳ ಮೇಲೆ ಕಣ್ಣಿಟ್ಟಿದ್ದ ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

Lingayata--011

ಬೆಂಗಳೂರು, ಜ.6-ವಿಧಾನಸಭೆ ಚುನಾವಣೆಗೂ ಮುನ್ನವೇ ಲಿಂಗಾಯಿತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಮೂಲಕ ಮತ ಬ್ಯಾಂಕ್ ಗಟ್ಟಿಗೊಳಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ರಣತಂತ್ರಕ್ಕೆ ಭಾರೀ ಹಿನ್ನಡೆಯಾಗಿದೆ. ಏಕೆಂದರೆ ರಾಜ್ಯ ಸರ್ಕಾರ ರಚಿಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿಯು ಲಿಂಗಾಯಿತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಕುರಿತು ವರದಿ ನೀಡಲು ಕನಿಷ್ಟ 6 ತಿಂಗಳು ಸಮಾಯವಕಾಶವನ್ನು ಕೇಳಿದೆ.

ಶನಿವಾರ ಬೆಳಗಿನ ವಿಕಾಸಸೌಧದಲ್ಲಿ ಸಮಿತಿ ಅಧ್ಯಕ್ಷ ನಾಗಮೋಹನ್ ದಾಸ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ದ್ವಾರಕನಾಥ್ ನವದೆಹಲಿಯ ನೆಹರು ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಪುರುಷೋತಮ್ ಬಿಳಿಮನೆ, ಪತ್ರಕರ್ತ ರಾಮಕೃಷ್ಣ ಮರಾಠೆ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಸುಮಾರು ಎರಡು ಗಂಟೆಗಳ ಹೆಚ್ಚು ಕಾಲ ಸಭೆ ನಡೆಸಿದ ಸಮಿತಿಯು ರ್ಯಾ ಸರ್ಕಾರ ನೀಡಿರುವ ಗಡುವಿನೊಳಗೆ ವರದಿ ನೀಡಲು ಸಾಧ್ಯವಿಲ್ಲ. ಕೂಲಂಕುಷವಾಗಿ ಅಧ್ಯಯನ ನಡೆಸಲು ಸಮಯ ಬೇಕಾಗಿರುವುದರಿಂದ ಆರು ತಿಂಗಳ ಕಾಲ ಸಮಯ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲು ಸಮಿತಿಯು ನಿರ್ಧರಿಸಿದೆ.  ಈ ಹಿಂದೆ ರಾಜ್ಯ ಸರ್ಕಾರ ಕಳೆದ ಡಿ.24ರಂದು 7ಮಂದಿ ತಜ್ಞರ ಸಮಿತಿ ರಚಿಸಿ ಒಂದು ತಿಂಗಳೊಳಗೆ ವರದಿ ನೀಡುವಂತೆ ಸೂಚಿಸಿತ್ತು. ಆದರೆ ಇದೀಗ ಸಮಿತಿಯ ಅಧ್ಯಕ್ಷರೇ ಆಗಿರುವ ನಾಗಮೋಹನ್ ದಾಸ್ ವರದಿ ಸಲ್ಲಿಸಲು 6 ತಿಂಗಳು ಸಮಯ ಕೇಳಿರುವುದು ಸರ್ಕಾರಕ್ಕೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ.   ಏಕೆಂದರೆ ಸಮಿತಿಯು ಒಂದು ತಿಂಗಳೊಳಗೆ ವರದಿ ನೀಡಿದ್ದರೆ ಅದನ್ನು ಅನುಷ್ಟಾನ ಮಾಡಲು ಸರ್ಕಾರ ಸಿದ್ದತೆ ನಡೆಸಿತ್ತು. ಅಲ್ಪಸಂಖ್ಯಾತ ಸ್ಥಾನಮಾನ ನೀಡಿದರೆ ಆ ಸಮುದಾಯದ ಮತಗಳನ್ನು ಗಣನೀಯ ಪ್ರಮಾಣದಲ್ಲಿ ಸೆಳೆಯುವುದು

Facebook Comments

Sri Raghav

Admin