ಸರಪಂಚ್ ನನ್ನು ಕತ್ತು ಸೀಳಿ ಭೀಕರವಾಗಿ ಕೊಂದ ನಕ್ಸಲರು

ಈ ಸುದ್ದಿಯನ್ನು ಶೇರ್ ಮಾಡಿ

nax

ರಾಯ್‍ಪುರ್, ಜ.6- ಗ್ರಾಮವೊಂದರ ಸರಪಂಚ್ ನನ್ನು ಕತ್ತು ಸೀಳಿ ಭೀಕರವಾಗಿ ನಕ್ಸಲರು ಹತ್ಯೆ ಮಾಡಿರುವ ಘಟನೆ ಬಸ್ತಾರ್ ಜಿಲ್ಲೆಯಲ್ಲಿ ನಡೆದಿದೆ.
ಚಿಂದ್‍ಗುರ್ ಗ್ರಾಮಕ್ಕೆ ನುಗಿದ ನಕ್ಸಲರ ತಂಡ ಗ್ರಾಮದ ಸರಪಂಚ್ ಪಂಡ್ರು (45) ಎಂಬುವವರನ್ನು ಸಾಯಿಸಿದೆ. ನಕ್ಸಲರು ಪಂಡ್ರುವಿನ ಮನೆಯೊಳಗೆ ನುಗ್ಗಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದೆ ಎಂದು ದಕ್ಷಿಣ ಬಸ್ತಾರ್ ವಲಯದ ಡಿಐಜಿ ಪಿ.ಸುಂದರರಾಜ್ ತಿಳಿಸಿದ್ದಾರೆ.

ಈ ಘಟನೆ ನಡೆದ ಗ್ರಾಮವು ದರ್ಭಾ ಅರಣ್ಯ ಪ್ರದೇಶಕ್ಕೆ ಕೇವಲ 25ಕಿ.ಮಿ ದೂರದಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ತಂಡವನ್ನು ಘಟನೆ ನಡೆದ ಗ್ರಾಮಕ್ಕೆ ಕಳುಹಿಸಲಾಗಿದೆ ಅಲ್ಲಿ ಪರಿಸ್ಥಿತಿ ಶಾಂತವಾಗಿದೆ. ಸರಪಂಚ್ ನ ದೇಹವನ್ನು ಪೋಸ್ಟ್ ಮಾರ್ಟಮ್ ಗೆ ಕಳುಹಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ. ಚಿಂದ್‍ಗುರ್‍ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಚಟುವಟಿಕೆಗಳನ್ನು ವಿರೋಧಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸರಪಂಚ್ ನನ್ನು ಹತ್ಯೆ ಮಾಡುವ ಮೂಲಕ ನಕ್ಸಲರು ಸೇಡು ತೀರಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

Facebook Comments

Sri Raghav

Admin