ಹೈಟೆಕ್ ವೇಶ್ಯಾವಾಟಿಕೆ ದಂಧೆ ಪತ್ತೆ : ರಹಸ್ಯ ಸುರಂಗದಿಂದ ರೇಪಿಸ್ಟ್ ಬಾಬಾ ಗುರ್ಮೀತ್ ಅನುಚರ ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

Gurmit

ಕೋಲ್ಕತಾ, ಜ.6-ಪಶ್ಚಿಮಬಂಗಾಳದ ರಾಜಧಾನಿ ಬುರ್ರಾಬಜಾರ್ ಪ್ರದೇಶದ ಅತಿಥಿಗೃಹವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ವ್ಯವಸ್ಥಿತ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಪತ್ತೆ ಮಾಡಿದ್ದಾರೆ. ಈ ಸಂಬಂಧ ಕೆಲವನ್ನು ಬಂಧಿಸಲಾಗಿದ್ದು, ದಂಧೆಯಿಂದ ವಿವಿಧ ರಾಜ್ಯಗಳ ಯುವತಿಯರನ್ನು ರಕ್ಷಿಸಲಾಗಿದೆ. ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಜೈಲು ಪಾಲಾಗಿರುವ ಹರಿಯಾಣದ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಬಾಬಾನ ಅನುಚರ ಎನ್ನಲಾದ ವೇಶ್ಯಾವಾಟಿಕೆ ದಂಧೆಯ ಸೂತ್ರಧಾರಿ ಪ್ರಮೋಧ್ ಸಿಂಘಾನಿಯಾ ರಹಸ್ಯ ಸುರಂಗದ ಮೂಲಕ ಪರಾರಿಯಾಗಿದ್ದಾನೆ.

ಗೇಸ್ಟ್ ಹೌಸ್‍ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಬಗ್ಗೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಅತಿಥಿ ಗೃಹ ಮತ್ತು ವಸತಿ ಕಟ್ಟಡದ ಒಂದು ಮಹಡಿಯಲ್ಲಿ 10 ಅಡಿ ಉದ್ದ 10 ಅಡಿ ಅಗಲದ 25 ಮರದ ಕ್ಯಾಬಿನ್‍ಗಳನ್ನು ನಿರ್ಮಿಸಿ ಅಲ್ಲಿ ವ್ಯವಸ್ಥಿತವಾಗಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ಇಷ್ಟೆಲ್ಲಾ ದಂಧೆ ನಡೆಯುತ್ತಿದ್ದರೂ ಅಕ್ಕಪಕ್ಕದ ನಿವಾಸಿಗಳಿಗೆ ಇದರ ಸುಳಿವು ಲಭಿಸಿರಲಿಲ್ಲ. ಆದರೆ ಡಿ.25ರಂದು ಮರದ ಕ್ಯಾಬಿನ್‍ನಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆ ಅಕಸ್ಮಾತ್ ಸ್ಥಳೀಯರೊಬ್ಬರ ಕಣ್ಣಿಗೆ ಬಿದ್ದು ಪೊಲೀಸರಿಗೆ ದೂರು ನೀಡಿದ್ದರು.

ಸ್ಥಳೀಯರ ನೆರವಿನೊಂದಿಗೆ ಪೊಲೀಸರು ಗೆಸ್ಟ್‍ಹೌಸ್ ಮೇಲೆ ದಾಳಿ ನಡೆಸಿ ದಂಧೆಯನ್ನು ಪತ್ತೆ ಮಾಡಿದ್ದಾರೆ. ಪಶ್ಚಿಮಬಂಗಾಳ, ಪಂಜಾಬ್, ಹರಿಯಾಣ ಮೊದಲಾದ ರಾಜ್ಯಗಳ ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ.  ಈ ಸ್ಥಳದಲ್ಲಿ ರಹಸ್ಯ ಸುರಂಗ ಮಾರ್ಗ ಇದ್ದು, ದಾಳಿಗೆ ಕೆಲವೇ ನಿಮಿಷಗಳ ಮುನ್ನ ಈ ದಂಧೆ ಸೂತ್ರಧಾರಿ ಮತ್ತು ಮಾಲೀಕ ಸಿಂಘಾನಿಯಾ ಪರಾರಿಯಾಗಿದ್ದು, ಆತನಿಗಾಗಿ ವ್ಯಾಪಕ ಬಲೆ ಬೀಸಲಾಗಿದೆ.   ಈ ಸಂಬಂಧ ಬಂಧಿತರಾದ ಕೆಲವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

Facebook Comments

Sri Raghav

Admin