ಅಮೆರಿಕದಲ್ಲಿ ಬಾಂಬ್ ಸೈಕ್ಲೋನ್ ಹಿಮಗಾಳಿಗೆ 19 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

america-02

ನ್ಯೂಯಾರ್ಕ್, ಜ.7-ಅಮೆರಿಕದ ಈಶಾನ್ಯ ಭಾಗದಲ್ಲಿ ಬಾಂಬ್ ಸೈಕ್ಲೋನ್ ಹೆಸರಿನ ಭೀಕರ ಹಿಮಗಾಳಿ ಅಪ್ಪಳಿಸಿ ಈವರೆಗೆ 19 ಮಂದಿ ಮೃತಪಟ್ಟು, ಅನೇಕರು ತೀವ್ರ ಅಸ್ವಸ್ಥರಾಗಿದ್ದಾರೆ. ಮಂಜುಗಟ್ಟಿದ ವಾತಾವರಣದಿಂದಾಗಿ ಈ ಪ್ರಾಂತ್ಯದ ಉಷ್ಣಾಂಶದಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಜನರು ಶೀತಹವೆಗೆ ತತ್ತರಿಸಿದ್ದಾರೆ. ಅಮೆರಿಕದ ಈಶಾನ್ಯ ಭಾಗದಲ್ಲಿ ಮುಂದಿನ ಹಲವು ದಿನಗಳ ಕಾಲ ಉಷ್ಣತೆಯು ಸಾಮಾನ್ಯ ಮಟ್ಟಕ್ಕಿಂತ 30 ಡಿಗ್ರಿ ಸೆಲ್ಟಿಯಸ್‍ನಷ್ಟು ಕುಸಿಯುವ ಆತಂಕವಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬಾಲ್ಟಿಮೋರ್‍ನಿಂದ ಮೇನ್ ರಾಜ್ಯದ ಕ್ಯಾರಿಬೌವರೆಗೆ ಹೆದ್ದಾರಿಯಲ್ಲಿ ದಟ್ಟ ಮಂಜು ಆವರಿಸಿದೆ. ಉಳಿದ ಪ್ರಾಂತ್ಯಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ರಸ್ತೆ ಮೇಲೆ ಬಿದ್ದಿರುವ ಮಂಜು ಮತ್ತು ಹಿಮವನ್ನು ತೆಗೆಯಲು ರಕ್ಷಣಾ ಕಾರ್ಯಕರ್ತರು ಶ್ರಮಿಸುತ್ತಿದ್ದು, ಪ್ರತಿಕೂಲ ವಾತಾವರಣ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿದೆ.
ಈ ಭಾಗದ ವಾತಾವರಣ ತುಂಬಾ ಅಪಾಯಕಾರಿಯಾಗಿದ್ದು, ಜನರು ಈ ಶೈತ್ಯ ಪರಿಸರದ ಸಂಪರ್ಕಕ್ಕೆ ಬಂದರೆ ಕೆಲವೇ ನಿಮಿಷಗಳಲ್ಲಿ ಮರಗಟ್ಟಿ ಹೋಗುತ್ತಾರೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಎಚ್ಚರಿಕೆ ನೀಡಿದೆ.

Facebook Comments

Sri Raghav

Admin