ಅಲ್ಪಸಂಖ್ಯಾತರ ಮತಗಳನ್ನು ನಂಬಿಕೊಂಡಿದ್ದ ಕಾಂಗ್ರೆಸ್‍ಗೆ ಒವೈಸಿ ಬಿಗ್ ಶಾಕ್

ಈ ಸುದ್ದಿಯನ್ನು ಶೇರ್ ಮಾಡಿ

Owisi--02

ಬೆಂಗಳೂರು, ಜ.7- ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಚುನಾವಣೆಯ ಕಾವೇರತೊಡಗಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಬಿರುಸಿನ ಚುನಾವಣಾ ಪ್ರಚಾರ ಕಾರ್ಯ ನಡೆಸುತ್ತಿವೆ. ಆಡಳಿತಾರೂಢ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ನಾನಾ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಆರಂಭದಲ್ಲಿ ವಿಘ್ನವೊಂದು ಎದುರಾಗಿದೆ. ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟು ಅಲ್ಪಸಂಖ್ಯಾತರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿ ಆ ಮತಗಳನ್ನು ನಂಬಿಕೊಂಡಿರುವ ಕಾಂಗ್ರೆಸ್‍ಗೆ ಆಘಾತವೊಂದು ಎದುರಾಗಿದೆ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಮತಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಅಖಿಲ ಭಾರತ ಮುಸ್ಲೀಸ್-ಎ-ಇತಾ-ಹಾದುಲ್-ಮುಸ್ಲಿಂ-ಮೀನ್ (ಎಐಎಂಐಎಂ) ಚಿಂತನೆ ನಡೆಸಿರುವುದು ಕಾಂಗ್ರೆಸ್‍ನಲ್ಲಿ ಕೊಂಚ ತಲ್ಲಣ ಉಂಟುಮಾಡಿದೆ. ಕರ್ನಾಟಕ ರಾಜಕೀಯಕ್ಕೆ ಎಂಟ್ರಿಯಾಗುವುದಾಗಿ ಈ ಹಿಂದೆ ಹೇಳಿಕೊಂಡಿದ್ದ ಒವೈಸಿ ಅದರಂತೆ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಬಂಧ ಕ್ಷೇತ್ರಗಳನ್ನು ಗುರುತಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಇದು ಕಾಂಗ್ರೆಸ್‍ಗೆ ಬಿಸಿ ತುಪ್ಪವಾಗಿದೆ.

ಮುಸ್ಲಿಂ ಮತಗಳನ್ನು ಒಡೆಯುವ ಸಾಮಥ್ರ್ಯ ಹೊಂದಿರುವ ಎಸ್‍ಡಿಪಿಐನಂತಹ ಸಣ್ಣ ಪಕ್ಷ ಚುನಾವಣೆಯಲ್ಲಿ ಮುಳುವಾಗಬಹುದು. ಅದರ ಜತೆಗೆ ಒವೈಸಿ ಸೇರಿದರೆ ಕಾಂಗ್ರೆಸ್‍ನ ಭದ್ರಕೋಟೆಗೆ ಸಮಸ್ಯೆಯಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಈಗಾಗಲೇ 28 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಒವೈಸಿ ಮುಂದಾಗಿದೆ ಎಂದು ತಿಳಿದುಬಂದಿದೆ. ಇನ್ನು ದಕ್ಷಿಣ ಕರ್ನಾಟಕ ಕ್ಷೇತ್ರ ಸೇರಿದಂತೆ ಒಟ್ಟು 60 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಕರ್ನಾಟಕದ ಎಐಎಂಐಎಂ ಮುಖ್ಯಸ್ಥ ಉಸ್ಮಾನ್ ಬನಿ ತಿಳಿಸಿದ್ದಾರೆ. ಈ ಅಭ್ಯರ್ಥಿಗಳು ಕಣಕ್ಕಿಳಿದರೆ ಕಾಂಗ್ರೆಸ್‍ನ ಮುಸ್ಲಿಂ ಮತಬುಟ್ಟಿಗೆ ಕೈ ಹಾಕುವುದು ಗ್ಯಾರಂಟಿ. ರಾಜ್ಯದಲ್ಲಿ ಶೇ.12ರಷ್ಟು ಮುಸ್ಲಿಮರಿದ್ದಾರೆ. ಈ ಮುಸ್ಲಿಂ ಮತ ಬ್ಯಾಂಕ್‍ಅನ್ನೇ ಕಾಂಗ್ರೆಸ್ ಅವಲಂಬಿತವಾಗಿದೆ. ಈ ಮತಗಳು ವಿಂಗಡಣೆಯಾದರೆ ಕಾಂಗ್ರೆಸ್‍ಗೆ ಡ್ಯಾಮೇಜ್ ಗ್ಯಾರಂಟಿ.

Facebook Comments

Sri Raghav

Admin