ಅಸಿಯಾನ್ ಜೊತೆ ಸದೃಢ ಸಂಬಂಧಕ್ಕೆ ಎನ್‍ಆರ್‍ಐಗಳು ವೇದಿಕೆ : ಸುಷ್ಮಾ

ಈ ಸುದ್ದಿಯನ್ನು ಶೇರ್ ಮಾಡಿ

Sushma--02

ಸಿಂಗಪುರ್, ಜ.7-ಅಸಿಯಾನ್ (ಅಸೋಸಿಯೇಷನ್ ಫಾರ್ ಸೌತ್‍ಈಸ್ಟ್ ನೇಷನ್ಸ್ ಅಥವಾ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ದೇಶಗಳ ಜೊತೆ ಭಾರತದ ಮಾತುಕತೆಯು ಮಹತ್ವದ ಸಹಭಾಗಿತ್ವಕ್ಕೆ ಕಾರಣವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಸಿಂಗಪುರ್‍ನಲ್ಲಿ ಅಸಿಯಾನ್-ಭಾರತ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರು ಮತ್ತು ಭಾರತೀಯ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸಿಯಾನ್ ಜೊತೆ ಸದೃಢ ಸಂಬಂಧಕ್ಕೆ ಭಾರತೀಯರು ಉತ್ತಮ ವೇದಿಕೆ ಕಲ್ಪಿಸಿದ್ದಾರೆ ಎಂದರು. ಭಾರತ ಮತ್ತು ಆಸಿಯಾನ್ ದೇಶಗಳ ನಡುವೆ ಭವಿಷ್ಯದಲ್ಲೂ ಉತ್ತಮ ಸಂಬಂಧ ಮುಂದುವರಿಸಲು ನಾವು ಬದ್ಧವಾಗಿದ್ದೇವೆ ಎಂದು ಅವರು ಹೇಳಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin