ತೈಲ ಟ್ಯಾಂಕರ್ ಮತ್ತು ಸರಕು ಸಾಗಣೆ ನೌಕೆಗಳ ನಡುವೆ ಡಿಕ್ಕಿ, ಬೆಂಕಿ : 32 ಮಂದಿ ಕಣ್ಮರೆ

ಈ ಸುದ್ದಿಯನ್ನು ಶೇರ್ ಮಾಡಿ

Boat--02

ಬೀಜಿಂಗ್, ಜ.7-ತೈಲ ಟ್ಯಾಂಕರ್ ಮತ್ತು ಸರಕು ಸಾಗಣೆ ನೌಕೆ ನಡುವೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ 32 ಮಂದಿ ಕಣ್ಮರೆಯಾಗಿರುವ ಘಟನೆ ಚೀನಾ ಕರಾವಳಿಯಲ್ಲಿ ಸಂಭವಿಸಿದ್ದು, ನಾಪತ್ತೆಯಾದವರಿಗೆ ತೀವ್ರ ಶೋಧ ಮುಂದುವರಿದಿದೆ. ಈ ದುರಂತದಲ್ಲಿ 30 ಇರಾನಿಗಳು ಮತ್ತು ಇಬ್ಬರು ಬಾಂಗ್ಲಾದೇಶಿಯರು ಕಣ್ಮರೆಯಾಗಿದ್ದಾರೆ.

1.36 ಲಕ್ಷ ಟನ್‍ಗಳಷ್ಟು ತೈಲ ಹೊತ್ತೊಯ್ಯುತ್ತಿದ್ದ ಪನಾಮ ನೋಂದಣಿಯ ತೈಲ ಟ್ಯಾಂಕರ್ ಹಾಂಕಾಂಗ್‍ನ ಸರಕು ಸಾಗಣೆ ನೌಕೆಗೆ ನಿನ್ನೆ ರಾತ್ರಿ 8 ಗಂಟೆಯಲ್ಲಿ ಡಿಕ್ಕಿ ಹೊಡೆಯಿತು. ಅಪಘಾತದ ತೀವ್ರತೆಗೆ ಬೆಂಕಿ ಹೊತ್ತಿಕೊಂಡಿತು. ಈ ದುರಂತದಲ್ಲಿ 32 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ. ಕಣ್ಮರೆಯಾದವರೆಲ್ಲರೂ ತೈಲ ಟ್ಯಾಂಕರ್‍ನವರು. ಸರಕುಸಾಗಣೆ ನೌಕೆಯಲ್ಲಿ ಅಪಾಯದಲ್ಲಿದ್ದ 21 ಮಂದಿಯನ್ನು ರಕ್ಷಿಸಲಾಗಿದೆ.

Facebook Comments

Sri Raghav

Admin