ಥಿಯೇಟರ್ ಕಡೆ ಬರಲು ರೆಡಿಯಾದ ‘ಹೆಬ್ಬೆಟ್ ರಾಮಕ್ಕ’

ಈ ಸುದ್ದಿಯನ್ನು ಶೇರ್ ಮಾಡಿ

hebbet-ramakka
ಸವಿರಾಜ್ ಸಿನಿಮಾಸ್ ಬ್ಯಾನರ್‍ ಅಡಿಯಲ್ಲಿ ನಿರ್ಮಾಣವಾಗಿರುವ ಹೆಬ್ಬೆಟ್‍ ರಾಮಕ್ಕ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾ ಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ನಾನು ಗಾಂಧಿ ಸೇರಿದಂತೆ ಬಹುತೇಕ ಮಕ್ಕಳ ಚಿತ್ರಗಳನ್ನೇ ನಿರ್ದೇಶಿಸಿದ್ದ ಎನ್.ಆರ್. ನಂಜುಂಡೇ ಗೌಡ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಬೆಂಗಳೂರು ಹಾಗೂ ಚನ್ನಪಟ್ಟಣ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಎಸ್.ಎ.ಪುಟ್ಟರಾಜು ಈ ಚಿತ್ರವನ್ನು ನಿರ್ಮಿಸಿದ್ದಾರೆ. ರಾಮಕ್ಕನಾಗಿ ಹಿರಿಯ ನಟಿ ತಾರಾ ಅಭಿನಯಿಸಿದ್ದಾರೆ. ದೇವರಾಜ್, ಹನುಮಂತೇಗೌಡ್ರು, ನಾಗರಾಜಮೂರ್ತಿ, ಜಗದೀಶ್ ಜಾಲ, ಮೈಮ ನಂಜುಂಡ, ಸಿಂಧು ಕಾನೇನಹಳ್ಳಿ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.

Facebook Comments

Sri Raghav

Admin