ದೀಪಕ್ ರಾವ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Siddaramauiah

ಮಂಗಳೂರು, ಜ. 7: ಮೃತ ದೀಪಕ್ ರಾವ್ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ದೀಪಕ್ ಮನೆಯವರಿಗೆ ಸಾಂತ್ವಾನ ಹೇಳಿದರು. ಸುರತ್ಕಲ್ ನ ಕಾಟಿಪಳ್ಳದಲ್ಲಿರುವ ದೀಪಕ್ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು. ದೀಪಕ್ ರಾವ್ ಜ. 3 ರಂದು ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದರು.  ದೀಪಕ್ ಸಹೋದರನಿಗೆ ಎಂ.ಆರ್.ಪಿ.ಎಲ್. ನಲ್ಲಿ ಕೆಲಸ ನೀಡುವಂತೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಈ ಸಂದರ್ಭ ಸಚಿವರಾದ ರಮನಾಥ್ ರೈ, ಯು.ಟಿ. ಖಾದರ್, ಮೇಯರ್ ಕವಿತಾ ಸನಿಲ್ ಹಾಗು ಇತರರು ಮುಖ್ಯಮಂತ್ರಿಗೆ ಸಾಥ್ ನೀಡಿದರು.

ಕೆಲಸ ಕೊಡಿಸಲು ಸೂಚನೆ :
ದೀಪಕ್ ಸಹೋದರ ಸತೀಶ್’ಗೆ ಎಂಆರ್’ಪಿಎಲ್’ನಲ್ಲಿ ಕೆಲಸ ಕೊಡಿಸಲು ಡಿಸಿ ಸಸಿಕಾಂತ್ ಸೆಂಥಿಲ್’ಗೆ ಸೂಚನೆ ನೀಡಿದ್ದಾರೆ. ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ದೀಪಕ್ ಮನೆ ಭೇಟಿ ಬಳಿಕ ಬಶೀರ್ ಮನೆಗೂ ಸಿಎಂ ಭೇಟಿ ನೀಡಿದ್ದಾರೆ. ಆಕಾಶ್ ಭವನದಲ್ಲಿರೋ ಬಶೀರ್ ನಿವಾಸಕ್ಕೆ ತೆರಳಿ ಬಶೀರ್ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

ಬಶೀರ್ ಮನೆಗೆ ಭೇಟಿ :
ಜ.3ರಂದು ದುಷ್ಕರ್ಮಿಗಳಿಂದ ಗಂಭೀರವಾಗಿ ಹಲ್ಲೆಗೊಳಗಾಗಿ ಇಂದು ಬೆಳಗ್ಗೆ ಮೃತಪಟ್ಟ ಬಶೀರ್ ಅವರ ಮಂಗಳೂರಿನ ಆಕಾಶಭವನದಲ್ಲಿರುವ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು. ಬಶೀರ್ ಮನೆಯವರಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಅವರು ಪ್ರಕರಣವನ್ನು ಗಂಭೀರವಾಗಿ ತನಿಖೆಗೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದರು. ಈ ಸಂದರ್ಭ ಸಚಿವರಾದ ರಮನಾಥ್ ರೈ, ಯು.ಟಿ. ಖಾದರ್, ಶಾಸಕ ಮೊಯ್ದಿನ್ ಬಾವ, ಮೇಯರ್ ಕವಿತಾ ಸನಿಲ್ ಹಾಗು ಇತರರು ಮುಖ್ಯಮಂತ್ರಿಗೆ ಸಾಥ್ ನೀಡಿದರು.

Facebook Comments

Sri Raghav

Admin