ಪಾರದರ್ಶಕ ರಾಜಕೀಯ ದೇಣಿಗೆಗೆ ಸೂಕ್ತ ಕ್ರಮ : ಜೇಟ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Arun-Jaitly--0121

ನವದೆಹಲಿ, ಜ.7-ರಾಜಕೀಯ ಪಕ್ಷಗಳ ದೇಣಿಗೆ ಸ್ವೀಕಾರ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಇದಕ್ಕಾಗಿ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಸರ್ಕಾರ ಸ್ವಾಗತಿಸುತ್ತದೆ ಎಂದು ತಿಳಿಸಿದ್ದಾರೆ. ರಾಜಕೀಯ ಪಕ್ಷಗಳು ದೇಣಿಗೆಗಳನ್ನು ಸ್ವೀಕರಿಸುವ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಚುನಾವಣಾ ಬಾಂಡ್‍ಗಳ ಪದ್ದತಿ ಜಾರಿಗೆಗೊಳಿಸಿದರೆ ಈ ವಿಧಾನದಲ್ಲಿ ಸಾಕಷ್ಟು ಸುಧಾರಣೆಗಳು ಕಂಡುಬರುತ್ತವೆ ಎಂದು ಅವರು ಫೇಸ್‍ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಈಗಿರುವ ದೇಣಿಗೆ ಸ್ವೀಕಾರ ಪದ್ದತಿಯು ಸಂಪ್ರದಾಯಿಕ ರೀತಿಯದ್ದು. ನಗದು ರೂಪದಲ್ಲಿ ವಂತಿಗೆ ಸಂಗ್ರಹಿಸಲಾಗುತ್ತಿದೆ. ಇದರಿಂದ ಸ್ವೀಕರಿಸಲಾದ ಹಣದ ಪ್ರಮಾಣವು ಬಹಿರಂಗವಾಗುವುದಿಲ್ಲ. ಅಲ್ಲದೇ ಬೇನಾಮಿ ಮೂಲಗಳಿಂದ ಬರುವ ಮೊತ್ತದ ಬಗ್ಗೆ ಮಾಹಿತಿ ಇರುವುದಿಲ್ಲ. ಹೀಗಾಗಿ ಹೊಸ ಪದ್ಧತಿ ಜಾರಿ ಅಗತ್ಯ. ಇದರಿಂದ ಪಾರದರ್ಶಕತೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Facebook Comments

Sri Raghav

Admin