ಬರಗೂರರ ‘ಮೂಕನಾಯಕ’ನಿಗೆ ಯು ಸರ್ಟಿಫಿಕೇಟ್

ಈ ಸುದ್ದಿಯನ್ನು ಶೇರ್ ಮಾಡಿ

mookanayaka
ಬರಗೂರು ರಾಮಚಂದ್ರಪ್ಪನವರು ಕತೆ, ಚಿತ್ರಕತೆ, ಸಂಭಾಷಣೆ, ಗೀತೆ ಬರೆದು ನಿರ್ದೇಶಿಸಿದ ಮೂಕನಾಯಕ ಕನ್ನಡ ಚಿತ್ರ ಇತ್ತೀಚೆಗೆ ಸೆನ್ಸಾರ್ ಆಗಿದ್ದು ಯು ಪ್ರಮಾಣಪತ್ರ ದೊರಕಿದೆ. ಈ ಚಿತ್ರವನ್ನು ಬಾಲರಾಜ್ ಎಂ. ಸಂಜೀವ್ ಮೂವೀಸ್ ಸಂಸ್ಥೆಯ ಬಾಲರಾಜ್ ಅವರು ನಿರ್ಮಿಸಿದ್ದಾರೆ. ರೂಪ ರವೀಂದ್ರನ್ ಅವರು ಸಹ ನಿರ್ಮಾಪಕಿಯಾಗಿದ್ದಾರೆ. ಮೂಕನಾಯಕ ಚಿತ್ರವು ವಿಶಿಷ್ಟ ಕಥಾನಕವನ್ನು ಒಳಗೊಂಡಿದೆ. ಸೂರ್ಯ ಎಂಬ ಗ್ರಾಮೀಣ ಚಿತ್ರಕಲಾವಿದ ಮತ್ತು ಆತನ ಅಕ್ಕ ಕಾವೇರಿ ಕೇಂದ್ರ ಪಾತ್ರಗಳಾಗಿರುವ ಈ ಚಿತ್ರವು ಕಲೆ ಮತ್ತು ಸಮಾಜದ ಸಂಬಂಧವನ್ನು ನಿರೂಪಿಸುತ್ತದೆ. ಕುಮಾರ್ ಗೋವಿಂದ್, ಸುಂದರರಾಜ್, ಸ್ಪರ್ಶ ಖ್ಯಾತಿಯ ರೇಖಾ, ಶೀತಲ್‍ಶೆಟ್ಟಿ, ಅಭಿನಯಿಸಿದ್ದಾರೆ. ಈ ಚಿತ್ರವನ್ನು ಶೀಘ್ರದಲ್ಲೇ ರಾಜ್ಯಾದ್ಯಂತ ಬಿಡುಗಡೆ ಮಾಡಲಾಗತ್ತದೆಯಂತೆ.

Facebook Comments

Sri Raghav

Admin