ಭಾರತದ ವಿರುದ್ಧ ಕಾಶ್ಮೀರ ಯುವಕರಿಗೆ ಪಾಕ್ ಕುಮ್ಮಕ್ಕು : ರಾಜ್‍ನಾಥ್ ಸಿಂಗ್ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

rajnath-sigh

ಟೆಕಾನ್‍ಪುರ್, ಜ.7-ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗೆ ಮೂಲಸೌಕರ್ಯಾಭಿವೃದ್ದಿ ಮುಂದುವರಿದಿದೆ ಎಂದು ಆರೋಪಿಸಿರುವ ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್, ಆ ದೇಶವು ಭಾರತದ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಯುವಕರನ್ನು ಎತ್ತಿ ಕಟ್ಟುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್‍ನ ಟೆಕಾನ್‍ಪುರ್‍ನಲ್ಲಿ ನಿನ್ನೆ ಪೊಲೀಸ್ ಮಹಾ ನಿರ್ದೇಶಕರು (ಡಿಜಿಪಿಗಳು) ಮತ್ತು ಪೊಲೀಸ್ ಮಹಾ ನಿರೀಕ್ಷಕರ(ಐಜಿಪಿಗಳು) ವಾರ್ಷಿಕ ಸಮಾವೇಶ ಉದ್ದೇಶಿಸಿ ಸಿಂಗ್ ಮಾತನಾಡಿದರು.

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದ ವಿವಿಧೆಡೆ ಉಗ್ರರ ತರಬೇತಿ ಶಿಬಿರಗಳು, ಭಾರತದ ಮೇಲೆ ದಾಳಿ ನಡೆಸುವ ಅಡಗುದಾಣಗಳು ಮತ್ತು ಸಂವಹನ ಕೇಂದ್ರಗಳ ಸ್ಥಾಪನೆ ರೂಪದಲ್ಲಿ ಪಾಕ್ ಭಯೋತ್ಪಾದನೆ ಮೂಲಸೌಕರ್ಯಕ್ಕೆ ಉತ್ತೇಜನ ಮುಂದುವರಿಸಿದೆ ಎಂದು ಗೃಹ ಸಚಿವರ ಆರೋಪಿಸಿದರು. ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರಿಗೆ ಹಣಕಾಸು ನೆರವು ಸೇರಿದಂತೆ ಎಲ್ಲ ರೀತಿಯ ಸಹಕಾರವನ್ನು ಪಾಕಿಸ್ತಾನ ಮುಂದುವರಿಸಿದೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರಿಗೆ ಭಾರತ ವಿರೋಧಿ ಭಾವನೆ ಹೊಂದಲು ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಧಾರ್ಮಿಕ ಸ್ಥಳಗಳಲ್ಲಿ ಗಲಭೆ ಮತ್ತು ಶಾಂತಿ ಕದಡುವ ಶಕ್ತಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದ ಅವರು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

Facebook Comments

Sri Raghav

Admin