ಮಾನವ ಹಕ್ಕುಗಳ ಆಯೋಗದ ಹೆಸರು ಹೇಳಿ ಹಣ ನೀಡುವಂತೆ ಬೆದರಿಸಿದ್ದ 6 ಮಂದಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

6-Arrested--01

ಬೆಂಗಳೂರು, ಜ.7-ಫ್ಯಾಕ್ಟರಿಯೊಂದಕ್ಕೆ ಹೋಗಿ ಮಾನವ ಹಕ್ಕುಗಳ ಆಯೋಗದ ಸರ್ಕಾರಿ ನೌಕರರೆಂದು ಹೇಳಿಕೊಂಡು 2 ಲಕ್ಷ ರೂ. ಕೊಡುವಂತೆ ಒತ್ತಾಯ ಮಾಡಿ ಬೆದರಿಕೆ ಹಾಕಿದ್ದ ಆರು ಮಂದಿಯನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದಿರಾನಗರದ ಸಂತೋಷ್‍ಕುಮಾರ್ ಅಲಿಯಾಸ್ ಸಂತೋಷ್ (34), ನಿಖಿಲ್ ಓಲಿವರ್ (23), ಕೃಷ್ಣನಪಾಳ್ಯದ ಪ್ರವೀಣ್‍ಕುಮಾರ್ (23), ಮೋಟಪ್ಪನಪಾಳ್ಯದ ರಾಮಚಂದ್ರ (29), ಪುಟ್ಟರಾಜು (26),, ಹಲಸೂರಿನ ಕಾರ್ತಿಕ್.ಆರ್ (28) ಬಂಧಿತ ಆರೋಪಿಗಳು.

ಆರೋಪಿಗಳು ನಿನ್ನೆ ಸಂಜೆ ಸಾರಾಯಿಪಾಳ್ಯ ಮಸೀದಿ ಬಳಿ ಇರುವ ಲೇಡಿಸ್ ಬ್ಯಾಗ್ ಉತ್ಪಾದನೆ ಫ್ಯಾಕ್ಟರಿಗೆ ಭೇಟಿ ನೀಡಿ ತಾವು ಮಾನವ ಹಕ್ಕುಗಳ ಆಯೋಗದ ಸರ್ಕಾರಿ ನೌಕರರೆಂದು ಹೇಳಿಕೊಂಡಿದ್ದಾರೆ. ಬಾಲಕಾರ್ಮಿಕರನ್ನು ಅಕ್ರಮವಾಗಿ ಇಟ್ಟುಕೊಂಡು ಕೆಲಸ ಮಾಡಿಸಿಕೊಳ್ಳುತ್ತಿದ್ದೀರ. ಕಾರ್ಖಾನೆಯನ್ನು ಸೀಜ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿ 2 ಲಕ್ಷ ರೂ. ಕೊಡುವಂತೆ ಒತ್ತಾಯಿಸಿದ್ದರು. ಅಲ್ಲದೆ ರಾತ್ರಿ 8 ಗಂಟೆವರೆಗೆ ಫ್ಯಾಕ್ಟರಿಯಲ್ಲಿ ಕೂಡಿ ಹಾಕಿದ್ದರು.
ಈ ಸಂಬಂಧ ಕಾರ್ಖಾನೆಯ ಶಹಬಾಜ್ ಎಂಬುವರು ನೀಡಿದ ದೂರಿನ ಮೇರೆಗೆ ಸಂಪಿಗೆಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್, ಸಂಪಿಗೆ ಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಎಂ.ಎಚ್.ನಾಗ್ತೆ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಅಂಜನ್‍ಕುಮಾರ್ ನೇತೃತ್ವದಲ್ಲಿ ಸಬ್‍ಇನ್ಸ್‍ಪೆಕ್ಟರ್ ಶಿವಶಂಕರ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin