ಹತ್ಯೆಗೀಡಾದ ಬಷೀರ್, ದೀಪಕ್‍ ರಾವ್ ಇಬ್ಬರೂ ನನ್ನ ಸಹೋದರರಿದ್ದಂತೆ. : ಖಾದರ್

ಈ ಸುದ್ದಿಯನ್ನು ಶೇರ್ ಮಾಡಿ

UT-Khadara

ಮಂಗಳೂರು, ಜ.7- ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಷೀರ್, ದೀಪಕ್‍ರಾವ್ ಇಬ್ಬರೂ ನನ್ನ ಸಹೋದರರಿದ್ದಂತೆ. ಕರಾವಳಿಯಲ್ಲಿ ಇಂತಹ ಘಟನೆಗಳು ನಡೆದಿರುವುದು ದುರದೃಷ್ಟಕರ. ಶಾಂತಿ-ಸೌಹಾರ್ದತೆಯ ಅಗತ್ಯವಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಇಂದಿಲ್ಲಿ ಹೇಳಿದರು. ಯಾವುದೇ ಸಮಸ್ಯೆಗೆ ಕೊಲೆ ಪರಿಹಾರವಲ್ಲ. ಬಷೀರ್, ದೀಪಕ್‍ರಾವ್ ಇಬ್ಬರೂ ನನ್ನ ಸೋದರರೇ. ಅವರಿಬ್ಬರ ಹತ್ಯೆ ನಡೆದಿರುವುದು ಅತ್ಯಂತ ಖಂಡನೀಯ. ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಸಚಿವರು ಹೇಳಿದರು.
ಎರಡೂ ಕುಟುಂಬದವರಿಗೆ ನೋವಾಗಿರುವುದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಎರಡೂ ಸಮುದಾಯದವರು ಕುಳಿತು ಸೌಹಾರ್ದಯುತ ವಾತಾವರಣ ಉಂಟುಮಾಡುವ ಕೆಲಸ ಮಾಡಬೇಕು. ರಾಜಕೀಯ ಮಾಡಬಾರದು ಎಂದು ಅವರು ಹೇಳಿದರು.

Facebook Comments

Sri Raghav

Admin