7 ಭೀಕರ ಕೊಲೆಗಳನ್ನು ಮಾಡಿದ್ದ ಸರಣಿ ಹಂತಕನ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Arrest--01

ಪಟಿಯಾಲ, ಜ.7-ಏಳು ಭೀಕರ ಕೊಲೆಗಳನ್ನು ಮಾಡಿದ್ದ ಸರಣಿ ಹಂತಕನನ್ನು ಪಂಜಾಬ್‍ನ ಪಟಿಯಾಲ ಪೊಲೀಸರು ಬಂಧಿಸಿದ್ದಾರೆ. ಲೂಧಿಯಾನ ಜಿಲ್ಲೆಯ ಬಾಡ್ಲೋವಲ್ ಪ್ರದೇಶದ ಜಗರೂಪ್ ಸಿಂಗ್(47) ಬಂಧಿತ ಸೀರಿಯಲ್ ಕಿಲ್ಲರ್. ತಾನು ಕಳೆದ 22 ವರ್ಷಗಳಲ್ಲಿ ಏಳು ಹತ್ಯೆಗಳನ್ನು ಮಾಡಿರುವುದಾಗಿ ಆತ ತಪ್ಪೋಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರಣಿ ಹಂತಕ :
ಆಟೋ ಚಾಲಕನಾದ ಜಗರೂಪ್ 2004 ಮತ್ತು 2011ರಲ್ಲಿ ತನ್ನ ಇಬ್ಬರು ಪ್ರೇಯಸಿಯರ ಪತಿಯರನ್ನು ಬರ್ಬರವಾಗಿ ಕೊಂದಿದ್ದ. 1995ರಲ್ಲಿ ತಾನು ಮೊದಲ ಕೊಲೆ ಮಾಡಿದ್ದಾಗಿ ಆರೋಪಿಯು ವಿಚಾರಣೆ ವೇಳೆ ತಪ್ಪೋಪ್ಪಿಕೊಂಡಿದ್ದಾನೆ. ಇದಲ್ಲದೇ ಈತ ಇನ್ನೂ ನಾಲ್ಕು ಹತ್ಯೆಗಳನ್ನು ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಪಟಿಯಾಲದ ಮಾಡೆಲ್ ಪಟ್ಟಣ ಪ್ರದೇಶದಲ್ಲಿ ಡಿ.30ರಂದು 43 ವರ್ಷದ ರಾಜೇಂದ್ರ ಸಿಂಗ್ ಎಂಬುವರ ಹತ್ಯೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಸಿಂಗ್‍ನ ಕೊಲೆಗಳ ಕೃತ್ಯಗಳು ಬೆಳಕಿಗೆ ಬಂದಿತು.

Facebook Comments

Sri Raghav

Admin