ಎಚ್‍ಎಂ ಉಗ್ರ ಬಣಕ್ಕೆ ಸೇರಿದ ಪಿಎಚ್‍ಡಿ ವಿದ್ಯಾರ್ಥಿ..!

ಈ ಸುದ್ದಿಯನ್ನು ಶೇರ್ ಮಾಡಿ

mannan-wani
ಶ್ರೀನಗರ,ಜ.8-ಸಿವಿಲ್ ಸರ್ವೀಸ್‍ಗೆ ಸೇರಬೇಕನ್ನುವ ಆಸೆ ಹೊಂದಿದ್ದ ಬ್ರಿಲಿಯಂಟ್ ಎಎಂಯು ಸಂಶೋಧನಾ ವಿದ್ಯಾರ್ಥಿಯೊಬ್ಬ ಉಗ್ರ ಸಂಘಟನೆಗೆ ಸೇರಿ ಆತಂಕ ಮೂಡಿಸಿರುವ ಪ್ರಕರಣವೊಂದು ದಕ್ಷಿಣ ಕಾಶ್ಮೀರದಲ್ಲಿ ಬೆಳಕಿಗೆ ಬಂದಿದೆ. ಅಲಿಗಢ ಮುಸ್ಲಿಂ ವಿವಿಯಲ್ಲಿ ನಾಲ್ಕು ವರ್ಷಗಳ ಕಾಲ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಪಿಹೆಚ್‍ಡಿ ಮುಗಿಸಿರುವ ಮನನ್ ವಾನಿ(25)ಎಂಬಾತ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ್ದಾನೆ ಎನ್ನಲಾಗಿದೆ. ಸಿವಿಲ ಸರ್ವೀಸ್‍ಗೆ ಸೇರಬೇಕನ್ನುವ ಆಸೆ ಹೊಂದಿದ್ದ ಈತ ಎರಡು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಫಸ್ಟ್ ಪ್ರೈಜ್ ಪಡೆದಿದ್ದ. ನಿಜಕ್ಕೂ ಮನನ್ ವಾನಿ ಉಗ್ರ ಸಂಘಟನೆ ಸೇರಿದ್ದಾನೆ ಎಂದರೆ ನಂಬಲು ಸಾಧ್ಯವಿಲ್ಲ ಎಂದು ಸ್ನೇಹಿತರು ಹೇಳುತ್ತಾರೆ.

Facebook Comments

Sri Raghav

Admin