ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ಈ ಸುದ್ದಿಯನ್ನು ಶೇರ್ ಮಾಡಿ

Air-India--01

ಮುಂಬೈ, ಜ.8-ಗೋವಾದಿಂದ ಮುಂಬೈಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. 90 ಮಂದಿ ಪ್ರಯಾಣಿಕರು ಮತ್ತು ಚಾಲನ ಸಿಬ್ಬಂದಿ ಇದ್ದ ಏರ್‍ಬಸ್ ಎ.-319ನ ಹೈಡ್ರಾಲಿಕ್ ಸಿಸ್ಟಮ್ ವಿಫಲದಿಂದಾಗಿ ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಲಾಯಿತು. ಯಾವುದೇ ತೊಂದರೆಯಾಗದಂತೆ ಪ್ರಯಾಣಿಕರನ್ನು ಕೆಳಗೆ ಇಳಿಸಲಾಯಿತು ಎಂದು ಏರ್‍ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

Facebook Comments

Sri Raghav

Admin