ಐಎಎಸ್, ಐಪಿಎಸ್ ಅಧಿಕಾರಿಗಳ ಕೊಡುಗೆ ಏನು..? ಸರ್ಕಾರ ಖರ್ಚು ಮಾಡುತ್ತಿರುವ ಹಣ ಎಷ್ಟು..?

ಈ ಸುದ್ದಿಯನ್ನು ಶೇರ್ ಮಾಡಿ

IAS--Officers

ನವದೆಹಲಿ, ಜ.7-ಐಎಎಸ್, ಐಪಿಎಸ್ ಮತ್ತು ಇತರ ಉನ್ನತಾಧಿಕಾರಿಗಳ ವೇತನಗಳು ಮತ್ತು ಭತ್ಯೆಗಳಿಗೆ ಖರ್ಚು ಮಾಡುತ್ತಿರುವ ಹಣದ ವಿವರಗಳನ್ನು ಒದಗಿಸದ ಕೇಂದ್ರ ಸರ್ಕಾರದ ಬಗ್ಗೆ ಸಂಸದೀಯ ಸಮಿತಿಯೊಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಾರತೀಯ ಆಡಳಿತ ಸೇವೆ(ಎಐಎಸ್), ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಮತ್ತು ಭಾರತೀಯ ಅರಣ್ಯ ಸೇವೆ(ಐಎಫ್‍ಎಸ್) ಹಾಗೂ ಇತರ ಭಾರತೀಯ ಸೇವೆಗಳ ಅಧಿಕಾರಿಗಳು ದೇಶದ ಬೆಳವಣಿಗೆಗೆ ನೀಡಿರುವ ಕೊಡುಗೆಗಳನ್ನು ಮಾಪನ ಮಾಡಲು ಸೂಕ್ತ ವ್ಯವಸ್ಥೆಯೊಂದನ್ನು ರೂಪಿಸುವ ಅಗತ್ಯವಿದೆ ಎಂದು ಅಂದಾಜುಗಳ ಕುರಿತ ಸಂಸದೀಯ ಸಮಿತಿ ಸರ್ಕಾರಕ್ಕೆ ಸಲಹೆ ಮಾಡಿದೆ.

ರಾಜ್ಯಗಳು ಮತ್ತು ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಖಿಲ ಭಾರತ ಸೇವೆಗಳ ಉನ್ನತಾಧಿಕಾರಿಗಳಿಗೆ ನೀಡುತ್ತಿರುವ ಸಂಬಳ ಹಾಗೂ ಇತರ ಭತ್ಯೆಗಳಿಗೆ ಒಟ್ಟು ಖರ್ಚಾಗುತ್ತಿರುವ ವೆಚ್ಚಗಳ ವಿವರಗಳನ್ನು ಸರ್ಕಾರ ನೀಡದಿರುವ ಬಗ್ಗೆ ಬಿಜೆಪಿ ಧುರೀಣ ಡಾ. ಮುರಳಿ ಮನೋಹರ ಜೋಷಿ ನೇತೃತ್ವದ ಸಮಿತಿ ತನ್ನ ವರದಿಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಈ ಉನ್ನತಾಧಿಕಾರಿಗಳಿಗೆ ವ್ಯಯಿಸುತ್ತಿರುವ ವಿವರಗಳ ಬಗ್ಗೆ ಇನ್ನು ಮೂರು ತಿಂಗಳ ಒಳಗೆ ವರ್ಷವಾರು ಅಂಕಿ-ಅಂಶ ಮಾಹಿತಿ ನೀಡಬೇಕೆಂದು ಸಮಿತಿ ಬಯಸಿದೆ.

ಐಪಿಎಸ್, ಐಎಎಸ್, ಐಎಫ್‍ಎಸ್ ಶ್ರೇಣಿಯಂಥ ಅಧಿಕಾರಿಗಳಿಗೆ ಸರ್ಕಾರ ಸಾಕಷ್ಟು ಹಣ ವ್ಯಯಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಅವರು ನೀಡುತ್ತಿರುವ ಸೇವೆಗಳ ಬಗ್ಗೆ ಮËಲ್ಯಾಂಕನ ಮಾಡಬೇಕಾದ ಅಗತ್ಯವಿದೆ ಎಂದು ಸಮಿತಿ ಸಲಹೆ ಮಾಡಿದೆ.

Facebook Comments

Sri Raghav

Admin