ಐಎಸ್‍ಐ ಗುರುತಿನ ಹೆಲ್ಮೆಟ್ ಕಡ್ಡಾಯ ಮಾಡಿದ ಬೆನ್ನಲ್ಲೇ ಬಯಲಿಗೆ ಬಂತು ನಕಲಿ ಹೆಲ್ಮೆಟ್ ಜಾಲ..!

ಈ ಸುದ್ದಿಯನ್ನು ಶೇರ್ ಮಾಡಿ

Mysuru-Police--02

ಮೈಸೂರು, ಜ.8-ಸಾಂಸ್ಕøತಿಕ ನಗರಿಯಲ್ಲಿ ಐಎಸ್‍ಐ ಗುರುತಿನ ಹೆಲ್ಮೆಟ್ ಕಡ್ಡಾಯ ಮಾಡಿರುವ ಬೆನ್ನಲ್ಲೇ ನಕಲಿ ಹೆಲ್ಮೆಟ್ ಜಾಲ ಹರಡಿಕೊಂಡಿರುವುದು ಬೆಳಕಿಗೆ ಬಂದಿದೆ. ನಕಲಿ ಹೆಲ್ಮೆಟ್ ಜಾಲವನ್ನು ಬೆನ್ನಟ್ಟಿರುವ ಪೊಲೀಸರು ನಗರದ ವಿವಿಧೆಡೆ ಸುಮಾರು 100ಕ್ಕೂ ಹೆಚ್ಚು ನಕಲಿ ಹೆಲ್ಮೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಲ್ಮೆಟ್ ವ್ಯಾಪಾರಿಯೊಬ್ಬರು ನಕಲಿ ಹೆಲ್ಮೆಟ್‍ಗಳ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ನಗರದ ಕೆ.ಆರ್.ಠಾಣೆ ಇನ್ಸ್‍ಪೆಕ್ಟರ್ ಮಂಜುನಾಥ್ ಮತ್ತು ಸಿಬ್ಬಂದಿ ದಾಳಿ ಮಾಡಿ ವಿವಿಧ ಕಡೆ ರಸ್ತೆ ಬದಿ ವ್ಯಾಪಾರ ಮಾಡಲಾಗುತ್ತಿದ್ದ 120ಕ್ಕೂ ಹೆಚ್ಚು ನಕಲಿ ಹೆಲ್ಮೆಟ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಹೆಲ್ಮೆಟ್‍ಗಳನ್ನು ಪರಿಶೀಲನೆ ಮಾಡಲಾಗಿ ಸ್ಕ್ರೀನ್‍ಪ್ರಿಂಟ್‍ನಲ್ಲಿ ಐಎಸ್‍ಐ ಮಾರ್ಕ್‍ನ್ನು ಮುದ್ರಿಸಿ ಹೆಲ್ಮೆಟ್‍ಗಳಿಗೆ ಅಂಟಿಸಿರುವುದು ಕಂಡುಬಂದಿದೆ. ದಾಳಿ ವೇಳೆ ಸಾರ್ವಜನಿಕರು ಪ್ರತಿಕ್ರಿಯಿಸಿ ನಾವು ಹೆಲ್ಮೆಟ್ ಖರೀದಿಸುವಾಗ ಇವು ಐಎಸ್‍ಐ ಗುರುತಿನ ಹೆಲ್ಮೆಟ್‍ಗಳೆಂದು ನೀಡುತ್ತಾರೆ. ನಾವು ಅದನ್ನು ಖರೀದಿಸುತ್ತೇವೆ. ಇವುಗಳನ್ನು ಹಾಕಿಕೊಂಡು ಸಂಚರಿಸುವಾಗ ಸಂಚಾರಿ ಪೊಲೀಸರು ನಮ್ಮನ್ನು ಅಡ್ಡಗಟ್ಟಿ ಇದು ನಕಲಿ ಹೆಲ್ಮೆಟ್ ಎನ್ನುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

Facebook Comments

Sri Raghav

Admin