ಗೋಕರ್ಣದಲ್ಲಿ ವಿದೇಶಿ ಪ್ರಜೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Gokarna

ಉತ್ತರ ಕನ್ನಡ, ಜ.8- ಕುಮುಟಾ ತಾಲ್ಲೂಕಿನ ಗೋಕರ್ಣದ ರಥಬೀದಿಯಲ್ಲಿ ವಿದೇಶಿ ಪ್ರಜೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಇಂದು ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೆರಾಲ್ಡ್ ಬರ್ನಾಡ್ ಜೋಲಿ (44) ಮೃತ ವ್ಯಕ್ತಿ. ಫ್ರಾನ್ಸ್ ಮೂಲದ ವ್ಯಕ್ತಿಯಾದ ಈತ, ಡಿ.26ರಂದು ತನ್ನ ಸ್ನೇಹಿತರ ಜತೆ ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದರು. ಭಾರತದ ವಿವಿಧೆಡೆ ಸುತ್ತಾಡಿದ್ದ ಇವರು ಇಂದು ಗೋಕರ್ಣದಲ್ಲಿ ಐತಿಹಾಸಿಕ ಸ್ಥಳವನ್ನು ನೋಡಲು ಸುತ್ತಾಡುವ ಬೇಳೆ ಗೋಕರ್ಣದ ರಥ ಬೀದಿಯಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಜೆರಾಲ್ಡ್ ಬರ್ನಾಡ್ ಜೋಲಿ ಮದ್ಯ ವ್ಯಸನಿಯಾಗಿದ್ದರು ಎಂದು ತಿಳಿದು ಬಂದಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin