‘ಜೈ ಲವ್ಸ್ ಜಾನು’ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ತಮಿಳು ನಟ ವಿಶಾಲ್

ಈ ಸುದ್ದಿಯನ್ನು ಶೇರ್ ಮಾಡಿ

jai-loves-janu

ರಾಕ್ಷಸಿ, ವೈರ, ಸೈಕೋ ಶಂಕ್ರದಂತಹ ವಿಭಿನ್ನ ಹಾಗೂ ದೆವ್ವದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟ, ನಿರ್ದೇಶಕ ನವರಸನ್, ಜೈ ಲವ್ಸ್ ಜಾನು ಚಿತ್ರದ ಮೂಲಕ ಪ್ರೇಮ ಕಥೆಯ ಚಿತ್ರಗಳತ್ತ ಮುಖಮಾಡಿದ್ದಾರೆ. ಗೀತಾ ಎಂಟರ್‍ಟೈನ್‍ಮೆಂಟ್ ಬ್ಯಾನರ್ ಅಡಿ ನಿರ್ಮಾಣ ವಾಗುತ್ತಿರುವ ಜೈ ಲವ್ಸ್ ಜಾನು ಚಿತ್ರದ ಮೂಲಕ ಪ್ರಾಣ್ ಪೂಜಾರಿ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯ ವಾಗುತ್ತಿದ್ದಾರೆ. ನವರಸನ್, ತಬಲನಾಣಿ, ವಿಜಯ್ ಚೆಂಡೂರ್, ಕೆಂಪೇಗೌಡ ಅವರ ತಾರಾಬಳಗ ಈ ಚಿತ್ರಕ್ಕಿದೆ. ನಾಯಕಿ ಸೇರಿದಂತೆ ಉಳಿದ ಪಾತ್ರವನ್ನು ಸದ್ಯದಲ್ಲಿಯೇ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳಿವೆ.

ತಮಿಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ನಟ ವಿಶಾಲ್ ಮತ್ತು ಅವರ ತಂದೆ ಜಿ.ಕೆ ರೆಡ್ಡಿ ಚೆನ್ನೈನಲ್ಲಿ ಇತ್ತೀಚೆಗೆ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ನವರಸನ್ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿ ಬೆನ್ನು ತಟ್ಟಿ ಹರಸಿದ್ದಾರೆ. ಜೈ ಲವ್ಸ್ ಜಾನು ಚಿತ್ರವನ್ನು ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ವಿವಿಧೆಡೆ 45 ದಿನಗಳ ಕಾಲ ಚಿತ್ರೀಕರಣ ನಡೆಸಲು ನಿರ್ಧರಿಸಲಾಗಿದೆ. ಪ್ರೀತಿ ಮಾಡಿ ಕೈಗೂಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಆದರಾಚೆಯೂ ಜೀವನ ಇರಲಿದೆ ಎನ್ನುವುದನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎನ್ನುತ್ತಾರೆ ನಟ ನವರಸನ್. ವೈರ ಚಿತ್ರದ ಬಳಿಕ ಇಪ್ಪತ್ತೈದಕ್ಕೂ ಹೆಚ್ಚು ಕಥೆ ಕೇಳಿದ್ದೇನೆ.ಯಾವುದೂ ಇಷ್ಟವಾಗಲಿಲ್ಲ.ಪ್ರಾಣ್ ಹೇಳಿದ ಕಥೆ ಇಷ್ಟವಾಯಿತು. ಜೊತೆಗೆ ವೈರದಲ್ಲಿ ನಿರ್ಮಾಣದಲ್ಲಿ ಕೈಜೋಡಿಸಿದ್ದ ಗೀತಾ ಎಂಟಟೈನ್‍ಮೆಂಟ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ ಎಂದರು.

Facebook Comments

Sri Raghav

Admin