ದೀಪಕ್‍ ಹತ್ಯೆ ಹಿಂದೆ ಬಿಜೆಪಿ ಕೈವಾಡ : ಹೆಚ್ಡಿಕೆ ಬಾಂಬ್

ಈ ಸುದ್ದಿಯನ್ನು ಶೇರ್ ಮಾಡಿ

HDk
ಮೈಸೂರು, ಜ.8- ದೀಪಕ್‍ರಾವ್ ಹತ್ಯೆ ಹಿಂದೆ ಬಿಜೆಪಿ ಕಾರ್ಪೊರೇಟರ್  ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಸುರತ್ಕಲ್‍ನಲ್ಲಿ ನಡೆದ ದೀಪಕ್‍ರಾವ್ ಹತ್ಯೆ ಹಿಂದೆ ಬಿಜೆಪಿ ಕಾರ್ಪೊರೇಟರ್ ಕೈವಾಡವಿದೆ. ಈ ಹತ್ಯೆಗೆ ಸುಫಾರಿ ಕೊಟ್ಟವರು ಯಾರು ಎಂಬುದು ಸರ್ಕಾರಕ್ಕೆ ಗೊತ್ತಿದೆ. ಗೊತ್ತಿದ್ದರೂ ಬಹಿರಂಗ ಪಡಿಸಿಲ್ಲ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ಈ ಹತ್ಯೆ ಹಿಂದೆ ಬಿಜೆಪಿ ಮುಖಂಡರ ಕೈವಾಡವಿರುವ ಬಗ್ಗೆ ಸ್ಪಷ್ಟ ಮಾಹಿತಿ ಪಡೆದೇ ನಾನು ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

Facebook Comments

Sri Raghav

Admin