ಪ್ರದ್ಯುಮ್ನ ಕೊಲೆ ಪ್ರಕರಣದಲ್ಲಿ ವಿದ್ಯಾರ್ಥಿಗೆ ಜಾಮೀನು ನಿರಾಕರಣೆ

ಈ ಸುದ್ದಿಯನ್ನು ಶೇರ್ ಮಾಡಿ

Boy--02

ಗುರ್‍ಗಾಂವ್, ಜ.8-ಹರಿಯಾಣದ ರಯಾನ್ ಇಂಟರ್‍ನ್ಯಾಷಲನ್ ಸ್ಕೂಲ್‍ನಲ್ಲಿ ಏಳು ವರ್ಷದ ಪ್ರದ್ಯುಮ್ನ ಠಾಕೂಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ 16 ವರ್ಷದ ವಿದ್ಯಾರ್ಥಿಗೆ ಜಾಮೀನು ನೀಡಲು ಸೆಷನ್ಸ್ ನ್ಯಾಯಾಲಯ ಇಂದು ನಿರಾಕರಿಸಿದೆ.  ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗೆ ಜಾಮೀನು ನೀಡಲು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಸ್‍ಬೀರ್ ಸಿಂಗ್ ಕುಂಡು ನಿರಾಕರಿಸಿದರು. ಇಂದು ಈ ಪ್ರಕರಣ ಸಂಬಂಧ ಆರೋಪಿ, ಸಿಬಿಐ ಮತ್ತು ದೂರುದಾರ ಪರ ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ವಿದ್ಯಾರ್ಥಿಗೆ ಜಾಮೀನು ಮಂಜೂರು ಮಾಡಲು ತಿರಸ್ಕರಿಸಿತು. ಕಳೆದ ವರ್ಷ ಸೆಪ್ಟೆಂಬರ್ 8ರಂದು ಶಾಲೆಯ ಶೌಚಾಲಯದಲ್ಲಿ ಪ್ರದ್ಯುಮ್ನ ಗಂಟಲು ಸೀಳಿ ಕೊಲೆ ಮಾಡಲಾಗಿತ್ತು.

Facebook Comments

Sri Raghav

Admin