ಭಾರತದಲ್ಲಿ ಪ್ರತಿ 10 ಲಕ್ಷ ಮಂದಿಗೆ ಕೇವಲ 19 ಜಡ್ಜ್ ಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Judges--01

ನವದೆಹಲಿ, ಜ.8-ಭಾರತದಲ್ಲಿ ಪ್ರತಿ 10 ಲಕ್ಷ ಜನರಿಗೆ 19.66 ನ್ಯಾಯಾಧೀಶರಿದ್ದಾರೆ…! ಇದು ಕಾನೂನು ಸಚಿವಾಲಯದ ಇತ್ತೀಚಿನ ಅಂಕಿಅಂಶ ಮಾಹಿತಿಯಿಂದ ತಿಳಿದುಬಂದಿರುವ ಸಂಗತಿ. ೨೦೧೧ರ ಜನಗಣತಿ ಹಾಗೂ ಸುಪ್ರೀಂಕೋರ್ಟ್, ದೇಶದ 24 ಹೈಕೋರ್ಟ್‍ಗಳು, ಮತ್ತು ಅನೇಕ ಅಧೀನ ನ್ಯಾಯಾಲಯಗಳಿಗೆ ಮಂಜೂರಾದ ನ್ಯಾಯಾಧೀಶರ ಸಂಖ್ಯೆ ಆಧಾರದ ಮೇಲೆ ಈ ಅನುಪಾತದ ವಿವರ ಲಭ್ಯವಾಗಿದೆ.

ಭಾರತದ ನ್ಯಾಯಾಧೀಶರ ಸಂಖ್ಯೆಯಲ್ಲಿ ಕಳೆದ ಮೂರು ವರ್ಷಗಳಿಂದ ಸ್ಪಲ್ಪಮಟ್ಟಿಗೆ ಹೆಚ್ಚಳ ಕಂಡುಬಂದಿರುವುದು ಸಮಾಧಾನಕರ ಸಂಗತಿ. 2014ರಲ್ಲಿ ದೇಶದ ಪ್ರತಿ 10 ಲಕ್ಷ ಜನರಿಗೆ 17.48ರಷ್ಟು ನ್ಯಾಯಾಧೀಶರಿದ್ದರು. ಮೂರು ವರ್ಷಗಳಲ್ಲಿ ಅದು 19.66ಕ್ಕೆ ಏರಿದೆ. ಸುಪ್ರೀಂಕೋರ್ಟ್‍ಗೆ 31 ನ್ಯಾಯಾಧೀಶರ ಹುದ್ದೆಗಳು ಮಂಜೂರಾಗಿದ್ದು, ಪ್ರಸ್ತುತ 25 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ಧಾರೆ. ಕರ್ನಾಟಕ ಸೇರಿದಂತೆ 24 ಹೈಕೋರ್ಟ್‍ಗಳಿಗೆ 1,079 ನ್ಯಾಯಾಧೀಶರ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಆದರೆ 395 ನ್ಯಾಯಾಧೀಶರ ಸ್ಥಾನಗಳು ಖಾಲಿ ಇದ್ದು, ಸದ್ಯಕ್ಕೆ 684 ಜಡ್ಜ್‍ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

Facebook Comments

Sri Raghav

Admin