ಮುಂಬೈ ಷೇರುಪೇಟೆಯಲ್ಲಿ ಸಾರ್ವಕಾಲಿಕ ದಾಖಲೆ

ಈ ಸುದ್ದಿಯನ್ನು ಶೇರ್ ಮಾಡಿ

Sensex-001

ಮುಂಬೈ, ಜ.8-ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ(ಬಿಎಸ್‍ಇ) ಇಂದು ವಹಿವಾಟಿನಲ್ಲಿ 178 ಅಂಶ ಏರಿಕೆ ಕಾಣುವ ಮೂಲಕ ಸಾರ್ವಕಾಲಿಕ ದಾಖಲೆ ಮಟ್ಟವನ್ನು ತಲುಪಿದೆ. ಇದರಿಂದ ಸತತ ಆರನೇ ವಾರವೂ ಸೂಚ್ಯಂಕಗಳ ಏರುಮುಖ ಚಲನೆ ಮುಂದುವರಿದಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಬಿಎಸ್‍ಇ 34,331.85ರ ಸಾರ್ವಕಾಲಿಕ ಮಟ್ಟ ತಲುಪಿದ್ದು, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ(ಎನ್‍ಎಸ್‍ಇ) ನಿಫ್ಟಿ ಮೊದಲ ಬಾರಿಗೆ 10,600 ಅಂಶಗಳಿಗೆ ಏರಿಕೆಯಾಗಿದೆ. ದೇಶಿ ಮತ್ತು ವಿದೇಶಿ ಹೂಡಿಕೆ ಹೆಚ್ಚಾಗಿರುವುದು, ಸೇವಾ ವಲಯ ಪ್ರಗತಿಯು ಸಕರಾತ್ಮಕ ವಹಿವಾಟು ಸಾಗುವಂತೆ ಮಾಡಿವೆ. ಔಷಧಿ, ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ಷೇರುಗಳ ಉತ್ತಮ ಖರೀದಿ ವಹಿವಾಟಿನಿಂದ ಈ ಹೊಸ ಏರಿಕೆ ಕಂಡುಬಂದಿವೆ.

Facebook Comments

Sri Raghav

Admin