ಮುಂಬೈ ಸೆಷನ್ಸ್ ಕೋರ್ಟ್ ನಲ್ಲಿ ಅಗ್ನಿ ಆಕಸ್ಮಿಕ, ಪೀಠೋಪಕರಣಗಳು ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

mumbai-1
ಮುಂಬೈ, ಜ.8- ನಗರದಲ್ಲಿ ಅಗ್ನಿ ಆಕಸ್ಮಿಕಗಳು ಮುಂದುವರಿದಿವೆ. ಇಲ್ಲಿನ ಸೆಷನ್ಸ್ ಕೋರ್ಟ್ ಕಟ್ಟಡದ ಮೂರನೇ ಮಹಡಿಯಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ದಕ್ಷಿಣ ಮುಂಬೈನಲ್ಲಿರುವ ವಿಶ್ವವಿದ್ಯಾಲಯದ ಕ್ಯಾಂಪಸ್ ಬಳಿ ಇರುವ ಕೋರ್ಟ್ ಕಟ್ಟಡದಲ್ಲಿ ಇಂದು ಬೆಳಗ್ಗೆ 7.14ರಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು ಎಂದು ಬೃಹನ್‍ಮುಂಬೈ ಮುನ್ಸಿಪಲ್ ಕಾಪೆರ್Çರೇಷನ್‍ನ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಕಳೆದ 20 ದಿನಗಳಲ್ಲಿ ಇದು ಮುಂಬೈನಲ್ಲಿ ಸಂಭವಿಸಿದ ಐದನೇ ಆಗ್ನಿ ಆಕಸ್ಮಿಕ. ಡಿ.18ರಂದು ಇಲ್ಲಿನ ಸಾಕಿ ನಾಕಾ-ಕುರ್ಲಾ ಪ್ರದೇಶದ ಸ್ನ್ಯಾಕ್ ಶಾಪ್ ಒಂದರಲ್ಲಿ ಬೆಂಕಿ ದುರಂತಕ್ಕೆ 12 ಮಂದಿ ಬಲಿಯಾಗಿದ್ದರು. ನಂತರ ಡಿ.29ರಂದು ಕಮಲಾ ಮಿಲ್ಸ್ ಕಾಂಪೌಂಡ್‍ನ ಪಬ್‍ನಲ್ಲಿ ಅಗ್ನಿ ದುರ್ಘಟನೆಗೆ 14 ಮಂದಿ ಸಾವಿಗೀಡಾಗಿದ್ದರು. ಆ.4ರಂದು ಮರೋಲ್ ಉಪನಗರದ ವಸತಿ ಕಟ್ಟಡದಲ್ಲಿ ಬೆಂಕಿ ವ್ಯಾಪಿಸಿ ಇಬ್ಬರು ಮಕ್ಕಳೂ ಸೇರಿದಂತೆ ನಾಲ್ವರು ಸುಟ್ಟು ಕರಕಲಾಗಿದ್ದರು. ಜ.6ರಂದು ಕುಂಜುಮಾರ್ಗ್‍ನ ಸಿನಿ ವಿಸ್ತಾ ಫಿಲ್ಮ್ ಸ್ಟುಡಿಯೋದಲ್ಲಿ ಅಗ್ನಿ ಕೆನ್ನಾಲಗೆಗೆ ಧಾರವಾಹಿ ತಂಡದ 20 ವರ್ಷದ ವ್ಯಕ್ತಿ ಸಜೀವ ದಹನಗೊಂಡಿದ್ದರು.

Facebook Comments

Sri Raghav

Admin