ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ ಪರಮೇಶ್ವರ್, ಇನ್ಮುಂದೆ ರಾಜಕೀಯದಲ್ಲೂ ಬರೀ ಬೌಂಡರಿ, ಸಿಕ್ಸರ್..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಜ.8- ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಕೆಪಿಸಿಸಿ ಅಧ್ಯಕ್ಷ .ಜಿ.ಪರಮೇಶ್ವರ್.ರಾಜಕೀಯದಲ್ಲೂ ಇನ್ನು ಮುಂದೆ ಬರೀ ಸಿಕ್ಸರ್, ಬೌಂಡರಿ ಬಾರಿಸಿ ನನ್ನ ತಾಕತ್ತು ಏನೆಂದು ತೋರಿಸುತ್ತೇನೆ. ಹೀಗೆಂದು ತಮ್ಮ ವಿರೋಧಿಗಳಿಗೆ ಮಾರ್ಮಿಕವಾಗಿ ಪರಂ ತಿರುಗೇಟು ನೀಡಿದರು. ಜಿಲ್ಲೆಯ ಕೊರಟಗೆರೆಯಲ್ಲಿ ಏರ್ಪಡಿಸಿದ್ದ ಕ್ರಿಕೆಟ್ ಟೂರ್ನಮೆಂಟ್ ಕಪ್‍ಗೆ ಬ್ಯಾಟ್ ಉತ್ಸುಕದಿಂದ ಪಾಲ್ಗೊಂಡು ತಮ್ಮದೇ ಶೈಲಿಯಲ್ಲಿ ಬ್ಯಾಟ್ ಬೀಸಿ ಚಾಲನೆ ನೀಡಿದರು.ಈ ಬಾರಿ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡಿದ್ದು, ಬಡವರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು , ಜನರು ಈ ಬಾರಿಯೂ ಸಹ ಪಕ್ಷದ ಕೈ ಹಿಡಿಯಲಿದ್ದಾರೆ ಎಂದರು. ಇದೇ ವೇಳೆ ಮಂಗಳೂರು ಗಲಭೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಬಷೀರ್ ಸಾವು ದುರ್ದೈವವಾಗಿದ್ದು, ಕೋಲು ಗಲಭೆ ಬಗ್ಗೆ ಜನರಿಗೆ ಅರಿವಿರಬೇಕು. ಅನವಶ್ಯಕವಾಗಿ ಗಲಭೆ ಮಾಡಿಕೊಳ್ಳಬಾರದು. ಇದರಿಂದ ಸರ್ಕಾರ ಹಾಗೂ ಜನರಿಗೂ ತೊಂದರೆಯಾಗುತ್ತದೆ ಎಂದರು.

ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಪರಮೇಶ್ವರ್ ಅವರು ತಮ್ಮ ಕ್ಷೇತ್ರದಲ್ಲಿ ನಾನಾ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಮತದಾರರ ಓಲೈಕೆಗೆ ಮುಂದಾಗಿದ್ದಾರೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ನೂರಾರು ತಂಡಗಳು ಭಾಗವಹಿಸಿದ್ದು, ಪರಮೇಶ್ವರ್ ಕಪ್ ಹಾಗೂ ಒಂದು ಲಕ್ಷ ನಗದಿಗಾಗಿ ಸೆಣಸಾಟ ನಡೆಸುತ್ತಿವೆ.

Facebook Comments

Sri Raghav

Admin